ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆ ಕುಸಿತ!
ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕ ಕುಸಿತಗೊಂಡಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 73.34 ರೂಗೆ ಕುಸಿದಿದೆ.

Published On :
ಮುಂಬೈ: ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕ ಕುಸಿತಗೊಂಡಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 73.34 ರೂಗೆ ಕುಸಿದಿದೆ.
ಪದೇ ಪದೇ ರೂಪಾಯಿ ಮೌಲ್ಯ ಕುಸಿತದ ಹಿನ್ನಲೆಯಲ್ಲಿ ಅಕ್ಟೋಬರ್ ನಲ್ಲಿ ಆರ್ ಬಿಐ 36000 ಸಾವಿರ ಕೋಟಿ ರೂ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿದ್ದು, ಸರ್ಕಾರಿ ಬಾಂಡ್ ಗಳ ಹಿಂಪಡೆದಿತ್ತು. ಆ ಮೂಲಕ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿತ್ತು. ಇದಾಗ್ಯೂ ಡಾಲರ್ ಮೌಲ್ಯ ಕುಸಿತಕಂಡಿದೆ.
ಸತತ ನಾಲ್ಕನೇ ವಾರವೂ ಡಾಲರ್ ಮೌಲ್ಯ ಕುಸಿತಗೊಂಡಿದ್ದು, ವಿಶ್ವ ಮಾರುಕಟ್ಟೆಯಲ್ಲಿ ಏಷ್ಯನ್ ಮಾರುಕಟ್ಟೆಯಲ್ಲಿ ನೀರಸ ವಹಿವಾಟು ಇಂದಿನ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಮತ್ತೊಂದೆಡೆ ಇಟಲಿ ಮತ್ತು ರೋಮ್ ಬಜೆಟ್ ಮಂಡನೆ ಯೂರೋಪಿಯನ್ ಒಕ್ಕೂಟ ಮಾರುಕಟ್ಟೆಯಲ್ಲಿ ಪರಿಣಾಮ ಬೀರಿದೆ.
ಮತ್ತೊಂದೆಡೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಏರಿಕೆ ಕೂಡ ರೂಪಾಯಿ ಮೌಲ್ಯಕ್ಕೆ ಕಾರಣ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Businessವಾಣಿಜ್ಯMumbaiಮುಂಬೈdollarಡಾಲರ್ರೂಪಾಯಿ ಮೌಲ್ಯIndian Stock Exchangeಭಾರತೀಯ ಷೇರು ಮಾರುಕಟ್ಟೆRupee value
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


