ದೇಶ

ಕೇರಳ ಪ್ರವಾಹ: ಏರ್ ಲಿಫ್ಟಿಂಗ್, ಆಹಾರ ಸಾಮಗ್ರಿ ಪೂರೈಕೆಗೆ ಭಾರತೀಯ ವಾಯುಪಡೆ 291 ಕೋಟಿ ರೂ. ಶುಲ್ಕ!

ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ...

ಕೇರಳ ಪ್ರವಾಹ: ಏರ್ ಲಿಫ್ಟಿಂಗ್, ಆಹಾರ ಸಾಮಗ್ರಿ ಪೂರೈಕೆಗೆ ಭಾರತೀಯ ವಾಯುಪಡೆ 291 ಕೋಟಿ ರೂ. ಶುಲ್ಕ!
ಕೇರಳ ಪ್ರವಾಹ ಸಂದರ್ಭದಲ್ಲಿ ವಾಯುಪಡೆ ಸಿಬ್ಬಂದಿಯ ಕಾರ್ಯಾಚರಣೆ
Published On :

ತಿರುವನಂತಪುರ: ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಿದ್ದ ನೆರವಾದ ಭಾರತೀಯ ವಿಮಾನ ಪಡೆಗೆ ಶುಲ್ಕವಾಗಿ 290.74 ಕೋಟಿ ರೂಪಾಯಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಈ ಕುರಿತು ನಿನ್ನೆ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ರಾಜ್ಯ ವಿಪತ್ತು ನಿರ್ವಹಣಾ ಪಡೆ ಒಟ್ಟು 987.73 ಕೋಟಿ ರೂಪಾಯಿ  ಪ್ರವಾಹ ಸಂದರ್ಭದಲ್ಲಿ ಮೀಸಲಾಗಿಟ್ಟಿದ್ದು, ಅವುಗಳಲ್ಲಿ 586.04 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಎಂದರು.

ಕೇಂದ್ರ ಸರ್ಕಾರ ಭರಿಸಿರುವ 290.74 ಕೋಟಿ ರೂಪಾಯಿ ಸೇರಿದಂತೆ ಉಳಿದಿರುವ ಬಾಕಿಯನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಇನ್ನೂ 706.74 ಕೋಟಿ ರೂಪಾಯಿಗಳ ತುರ್ತು ಅಗತ್ಯವಿದೆ. ರಾಜ್ಯ ಸರ್ಕಾರ ರಾಜ್ಯ ವಿಪತ್ತು ಪಡೆಯಿಂದ ಈಗಿನ ಪರಿಹಾರ ಕಾರ್ಯಗಳಿಗೆ ಹಣ ಬಳಸಿಕೊಂಡರೆ ಉಳಿದ ಬಾಕಿಯನ್ನು ಪಾವತಿಸಲು ಸಾಲ ಪಡೆಯಬೇಕಾಗಿದೆ ಎಂದು ಸಿಎಂ ಹೇಳಿದರು.

ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದಾನದ ರೂಪದಲ್ಲಿ 2,683.16 ಕೋಟಿ ರೂಪಾಯಿ ಬಂದಿದ್ದು ಅವುಗಳಲ್ಲಿ 688.48 ಕೋಟಿ ರೂಪಾಯಿ ವಿನಿಯೋಗವಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.