ಶಬರಿಮಲೆ ಪ್ರತಿಭಟನೆಯ ವೇದಿಕೆ ಅಲ್ಲ, ಇನ್ನಾವುದೇ ರೀತಿಯ ಪ್ರತಿಭಟನೆ ನಡೆಯಬಾರದು: ಕೇರಳ ಹೈಕೋರ್ಟ್
ಶಬರಿಮಲೆ ಪ್ರತಿಭಟನೆಯ ವೇದಿಕೆ ಅಲ್ಲ, ಇನ್ನಾವುದೇ ರೀತಿಯ ಪ್ರತಿಭಟನೆ ನಡೆಯಬಾರದು ಎಂದು ಕೇರಳ ಹೈಕೋರ್ಟ್ ಕಿಡಿಕಾರಿದೆ.

Published On :
ತಿರುವನಂತಪುರ: ಶಬರಿಮಲೆ ಪ್ರತಿಭಟನೆಯ ವೇದಿಕೆ ಅಲ್ಲ, ಇನ್ನಾವುದೇ ರೀತಿಯ ಪ್ರತಿಭಟನೆ ನಡೆಯಬಾರದು ಎಂದು ಕೇರಳ ಹೈಕೋರ್ಟ್ ಕಿಡಿಕಾರಿದೆ.
ಶಬರಿಮಲೆ ದೇಗುಲಕ್ಕೆ 10ರಿಂದ 50ರೊಳಗಿನ ಮಹಿಳೆಯರ ಪ್ರವೇಶ ಕುರಿತಂತೆ ಗಲಭೆಗೆ ಸಾಕ್ಷಿಯಾಗಿತ್ತು. ಈ ಘಟನೆ ಹಿನ್ನಲೆಯಲ್ಲಿ ಇಂದು ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜಿಲ್ಲಾಡಳಿತವನ್ನು ಕೇರಳ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅಯ್ಯಪ್ಪ ದೇಗುಲ ಪ್ರತಿಭಟನೆಯ ತಾಣವಲ್ಲ ಎಂದು ಕಿಡಿಕಾರಿದೆ.
'ಅಯ್ಯಪ್ಪನ ದೇಗುಲ ಪ್ರತಿಭಟನೆಯ ತಾಣವಲ್ಲ. ಅಲ್ಲಿ ಇಂತಹ ಚಟುವಟಿಕೆಗಳು ನಡೆಯಬಾರದು ಎಂದು ಕೋರ್ಟ್ ಹೇಳಿದೆ. ಅಂತೆಯೇ ದೇಗುಲದ ಬಳಿ ಪೊಲೀಸರು ಹೇರಿರುವ ನಿರ್ಬಂಧದ ಬಗ್ಗೆಯೂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಮಂಡಲ-ಮಕರವಿಳಕ್ಕು ಹಬ್ಬದ ವೇಳೆ ನಿಗಾ ಇಡಲು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಪಿ.ಆರ್. ರಾಮನ್ ಹಾಗೂ ಸಿರಿ ಜಗನ್, ಹಿರಿಯ ಐಪಿಎಸ್ ಅಧಿಕಾರಿ ಎ. ಹೇಮಚಂದ್ರನ್ ಅವರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ನೀಳಕ್ಕಲ್ ಹಾಗೂ ಸನ್ನಿಧಾನಂ ಬಸ್ ಸಂಚಾರದ ಮೇಲೆ ಪೊಲೀಸರು ಹೇರಿರುವ ನಿರ್ಬಂಧಗಳನ್ನು ತೆಗೆದು ಹಾಕುವಂತೆಯೂ ಕೋರ್ಟ್ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪ್ರತಿಭಟನೆThiruvananthapuramKerala High Courtಕೇರಳ ಹೈಕೋರ್ಟ್ತಿರುವನಂತಪುರಂSabarimala templeಶಬರಿಮಲೆ ದೇವಸ್ಥಾನAyyappa Protest
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


