ಹೈಟೆಕ್ ಕಳ್ಳ: ಕದಿಯುವ ಸಲುವಾಗಿಯೇ ಟಿಕೆಟ್ ಪಡೆದು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಕದೀಮ ಅಂದರ್!
ವಿಮಾನಯಾನ ಸಂಸ್ಥೆಗಳು ನೀಡುವ ಕಡಿಮೆ ಬೆಲೆಯ ಟಿಕೆಟ್ ಆಫರ್ ಗಳನ್ನೇ ಬಳಸಿಕೊಂಡು ಕದೀಮನೊಬ್ಬ ವಿಮಾನ ಪ್ರಯಾಣದ ಟಿಕೆಟ್ ಪಡೆದು ಪ್ರಯಾಣಿಕನ ಸೋಗಿನಲ್ಲಿ ವಿಮಾನ...

Published On :
ವಿಮಾನಯಾನ ಸಂಸ್ಥೆಗಳು ನೀಡುವ ಕಡಿಮೆ ಬೆಲೆಯ ಟಿಕೆಟ್ ಆಫರ್ ಗಳನ್ನೇ ಬಳಸಿಕೊಂಡು ಕದೀಮನೊಬ್ಬ ವಿಮಾನ ಪ್ರಯಾಣದ ಟಿಕೆಟ್ ಪಡೆದು ಪ್ರಯಾಣಿಕನ ಸೋಗಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದು ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದವನ ಅಸಲಿ ಕಥೆ.
ಜಾರ್ಖಂಡ್ ಮೂಲದ 45 ವರ್ಷದ ಸಾಜೀದ್ ಹುಸೇನ್ ಬಂದಿತ ಕಳ್ಳ. ಇತ ವಿಮಾನ ನಿಲ್ದಾಣಕ್ಕೆ ಬಂದು ಪ್ರಯಾಣಿಕರ ಬ್ಯಾಗ್, ಪರ್ಸ್ ಅಥವಾ ಇನ್ನಿತರ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದ ಎಂದು ತಿಳಿದುಬಂದಿದೆ.
ಕಳೆದ ಭಾನುವಾರ ಆತನ ನಸೀಬು ಕೈಕೊಟ್ಟಿತ್ತು ಅನಿಸುತ್ತದೆ. ಹೀಗಾಗಿ ಕೊಲ್ಕತ್ತಾ ಪೊಲೀಸರ ಅತಿಥಿಯಾಗಿದ್ದಾನೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸಾಜಿದ್ ಪರ್ಸ್, ಕಿವಿ ಓಲೆ, ಚಿನ್ನದ ಸರ ಮತ್ತು 3,500 ರುಪಾಯಿ ನಗದನ್ನು ಪ್ರಯಾಣಿಕರೊಬ್ಬರಿಂದ ಕದ್ದಿದ್ದಾನೆ.
ಸಾಜಿದ್ ಕೆಲ ತಿಂಗಳುಗಳಿಂದ ಪಾಟ್ನಾ ಹಾಗೂ ಕೊಲ್ಕತ್ತಾ ವಿಮಾನ ನಿಲ್ದಾಣಗಳಲ್ಲಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 5ರಂದು ಸಾಜಿದ್ ಮಹಿಳಾ ಪ್ರಯಾಣಿಕರ ಬ್ಯಾಗ್ ನಿಂದ ಪರ್ಸ್ ಕದಿಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಅಂತೆ ಕಳೆದ ಭಾನುವಾರ ವಿಮಾನ ನಿಲ್ದಾಣಕ್ಕೆ ಸಾಜಿದ್ ಬರುತ್ತಿದ್ದಂತೆ ಆತನನ್ನ ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


