ದೇಶ

ಅಮೃತಸರ ನಿರಾನ್ಕಾರಿ ಭವನದಲ್ಲಿ ಸ್ಫೋಟ: ಭಯೋತ್ಪಾದಕರ ಕೃತ್ಯ!?

ಅಮೃತಸರದ ರಾಜಸಾನ್ಸಿ ಗ್ರಾಮದಲ್ಲಿರುವ ನಿರಾನ್ಕಾರಿ ಭವನದಲ್ಲಿ ನಡೆದಿರುವ ಸ್ಫೋಟ ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.

ಅಮೃತಸರ ನಿರಾನ್ಕಾರಿ ಭವನದಲ್ಲಿ ಸ್ಫೋಟ: ಭಯೋತ್ಪಾದಕರ ಕೃತ್ಯ!?
ಅಮೃತಸರ ನಿರಾನ್ಕಾರಿ ಭವನದಲ್ಲಿ ಸ್ಫೋಟ: ಭಯೋತ್ಪಾದಕರ ಕೃತ್ಯ!?
Published On :
ಚಂಡೀಗಢ: ಅಮೃತಸರದ ರಾಜಸಾನ್ಸಿ ಗ್ರಾಮದಲ್ಲಿರುವ ನಿರಾನ್ಕಾರಿ ಭವನದಲ್ಲಿ ನಡೆದಿರುವ ಸ್ಫೋಟ ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. 
ಸ್ಫೋಟ ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಅದು ಒಂದು ಗುಂಪಿನ ಮೇಲೆ ನಡೆದಿರುವ ದಾಳಿಯಾಗಿದೆ, ಆದ್ದರಿಂದ ಇದನ್ನು ಭಯೋತ್ಪಾದಕ ಕೃತ್ಯದ ದೃಷ್ಟಿಯಿಂದಲೇ ತನಿಖೆ ನಡೆಸುತ್ತೇವೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. 
ಭಯೋತ್ಪಾದಕ ಕೃತ್ಯವಾಗಿರದೇ ಇದ್ದರೆ ಸಮೂಹದ ಮೇಲೆ ಗ್ರೆನೇಡ್ ದಾಳಿ ನಡೆಸುವ ಸಾಧ್ಯತೆಗಳು ಕಡಿಮೆ ಇದೆ ಎಂದು ಪಂಜಾಬ್ ಡಿಜಿಪಿ ಸುರೇಶ್ ಅರೋರ ಹೇಳಿದ್ದಾರೆ. 
ಇದೇ ವೇಳೆ ಸ್ಫೋಟದ ಘಟನೆ ಕುರಿತು ನಿರ್ದಿಷ್ಟವಾದ ಸುಳಿವು ಸಿಕ್ಕಿಲ್ಲ ಎಂದೂ ಡಿಜಿಪಿ ತಿಳಿಸಿದ್ದಾರೆ.  ನಿರಾನ್ಕಾರಿ ಭವನದಲ್ಲಿ ಸ್ಫೋಟ ಸಂಭವಿಸಿದ್ದು ಮೂವರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದರು.  ಕೆಲ ದಿನಗಳ ಹಿಂದಷ್ಟೇ ದಾಳಿ ನಡೆಯುವ ಕುರಿತು ಗುಪ್ತಚರ ಇಲಾಖೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.