ಅಮಾನವೀಯ ಕೃತ್ಯ: ಗರ್ಭಪಾತದ ವೇಳೆ ಮೃತಪಟ್ಟ ಪ್ರೇಯಸಿ, ಮೃತದೇಹವನ್ನು ಕಾಡಿನಲ್ಲಿ ಬಿಸಾಡಿ ಹೋದ ಪ್ರಿಯಕರ!
ಗರ್ಭಪಾತದ ವೇಳೆ ಮೃತಪಟ್ಟ ಪ್ರೇಯಸಿಯ ದೇಹವನ್ನು ಪ್ರಿಯಕರ ಕಾಡಿನಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ...

Published On :
ಮುಜಾಫರ್ ನಗರ: ಗರ್ಭಪಾತದ ವೇಳೆ ಮೃತಪಟ್ಟ ಪ್ರೇಯಸಿಯ ದೇಹವನ್ನು ಪ್ರಿಯಕರ ಕಾಡಿನಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕುಟುಬ್ಪುರ್ ಗ್ರಾಮದ ಯುವತಿ ಆಸ್ಮಿನ್ ಎಂಬಾಕೆಯ ಮೃತದೇಹ ಸೆಪ್ಟೆಂಬರ್ 18ರಂದು ಪತ್ತೆಯಾಗಿತ್ತು. ಈ ಪ್ರಕಣದ ವಿಚಾರಣೆ ನಡೆಸಿದ ಪೊಲೀಸರು ಆಸ್ಮಿನ್ ಪ್ರಿಯಕರನನ್ನು ಬಂಧಿಸಿದ್ದಾರೆ.
ಈ ವೇಳೆ ಪ್ರಿಯಕರ ಹುಸೈನ್ ನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಗರ್ಭಪಾತದ ವೇಳೆ ಆಸ್ಮಿನ್ ಮೃತಪಟ್ಟಿದ್ದು ನಂತರ ಆಕೆಯ ಮೃತದೇಹವನ್ನು ಕಾಡಿನಲ್ಲಿ ಬಿಸಾಡಿ ಹೋಗಿದ್ದಾಗಿ ಹೇಳಿದ್ದಾನೆ.
ಈ ಸಂಬಂಧ ಹುಸೈನ್ ವಿರುದ್ಧ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಎಸ್ಪಿ ಸುಧೀರ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


