ರೂ.10 ಲಕ್ಷ ನೀಡದಿದ್ದರೆ ಇಡೀ ಕುಟುಂಬ ಸರ್ವನಾಶ; ಬಿಜೆಪಿ ಶಾಸಕಿಗೆ ದುಬೈ ಡಾನ್ ಬೆದರಿಕೆ, ಎಫ್ಐಆರ್ ದಾಖಲು
ರೂ.10 ಲಕ್ಷ ನೀಡದಿದ್ದರೆ ಇಡೀ ಕುಟುಂಬವನ್ನು ಸರ್ವನಾಶ ಮಾಡಿಬಿಡುತ್ತೇನೆಂದು ದುಬೈನಲ್ಲಿರುವ ಡಾನ್ ಒಬ್ಬ ಬಿಜೆಪಿ ಶಾಸಕಿಯೊಬ್ಬರಿಗೆ ಬೆದರಿಕೆ ಹಾಕುತ್ತಿದ್ದು, ಈ ಕುರಿತು ಉತ್ತರಪ್ರದೇಶ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ...

Published On :
ಬುಲಾಂದ್'ಶಹರ್; ರೂ.10 ಲಕ್ಷ ನೀಡದಿದ್ದರೆ ಇಡೀ ಕುಟುಂಬವನ್ನು ಸರ್ವನಾಶ ಮಾಡಿಬಿಡುತ್ತೇನೆಂದು ದುಬೈನಲ್ಲಿರುವ ಡಾನ್ ಒಬ್ಬ ಬಿಜೆಪಿ ಶಾಸಕಿಯೊಬ್ಬರಿಗೆ ಬೆದರಿಕೆ ಹಾಕುತ್ತಿದ್ದು, ಈ ಕುರಿತು ಉತ್ತರಪ್ರದೇಶ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಉತ್ತರಪ್ರದೇಶ ಬಿಜೆಪಿ ಶಾಸಕಿ ಡಾ.ಲೋಧಿ ರಜಪೂತ್ ಅವರಿಗೆ ದುಬೈ ಮೂಲದ ಡಾನ್ ಎಂದು ಹೇಳಲಾಗುತ್ತಿರುವ ಅಲಿ ಬುದೇಶ್ ಭಾಯ್ ಎಂಬಾತ ಬೆದರಿಗೆ ಹಾಕುತ್ತಿದ್ದು, ರೂ.10 ಲಕ್ಷ ನೀಡದಿದ್ದರೆ ನಿಮ್ಮ ಇಡೀ ಕುಟುಂಬವನ್ನು ನಾಶ ಮಾಡುತ್ತೇನೆಂದು ವಾಟ್ಸ್ ಆ್ಯಪ್ ಮೂಲಕ ಸಂದೇಶ ಕಳುಹಿಸುತ್ತಿದ್ದಾನೆಂದು ತಿಳಿದುಬಂದಿದೆ.
ಪದೇ ಪದೇ ಬೆದರಿಕೆ ಬರುತ್ತಿರುವ ಹಿನ್ನಲೆಯಲ್ಲಿ ಶಾಸಕಿ ಅನಿತಾ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರಪ್ರದೇಶಬೆದರಿಕೆBJP MLARansomAnita Lodhi RajputDubai donಬಿಜೆಪಿ ಸಾಸಕಿಅನಿತಾ ಲೋಧಿ ರಜಪೂತ್ದುಬೈ ಡಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


