ಪಶ್ಚಿಮ ಬಂಗಾಳ: ರಾಮ ನವಮಿ ಸಂದರ್ಭದ ಗಲಭೆಯಲ್ಲಿ ಮಗನನ್ನು ಕಳೆದುಕೊಂಡ ಇಮಾಮ್, ಶಾಂತಿ ಕಾಪಾಡಲು ಮನವಿ
ರಾಮ ನವಮಿ ಸಂದರ್ಭ ಗಲಭೆ ಉಂಟಾದ ಅಸನ್ ಸೋಲ್ ನಲ್ಲಿ ಜನರು ಶಾಂತಿ ಕಾಪಾಡುವಂತೆ ಗಲಭೆಯಲ್ಲಿ ಮಗನನ್ನು ಕಳೆದುಕೊಂಡ ಇಮಾಮ್ ಮನವಿ ಮಾಡಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ: ರಾಮ ನವಮಿ ಸಂದರ್ಭ ಗಲಭೆ ಉಂಟಾದ ಅಸನ್ ಸೊಲ್ ನಲ್ಲಿ ಜನರು ಶಾಂತಿ ಕಾಪಾಡುವಂತೆ ಗಲಭೆಯಲ್ಲಿ ಮಗನನ್ನು ಕಳೆದುಕೊಂಡ ಇಮಾಮ್ ಮನವಿ ಮಾಡಿಕೊಂಡಿದ್ದಾರೆ.
ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಆದರೆ, ಯಾವುದೇ ದೂರು ನೀಡಿಲ್ಲ.ನೀವು ತನನ್ನು ಪ್ರೀತಿಸುವುದಾದರೆ ಇದನ್ನು ವಿವಾದ ಮಾಡದೆ ಶಾಂತಿ ಕಾಪಾಡಿ ಎಂದು ನೂರಾನಿ ಮಸೀದ್ ಇಮಾಮ್ ಇಮ್ದಾತುಲ್ಲಾ ರಷೀದ್ ಮನವಿ ಮಾಡಿದ್ದಾರೆ.
ಗಲಭೆಯಲ್ಲಿ ಗಾಯಗೊಂಡಿದ್ದ ಇಮಾಮ್ ಮಗ ಹಫೀಜ್ ಸಬ್ ಕಾ ತುಲ್ಲಾ ಅಸನ್ ಸೋಲ್ ನ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.ಈ ಬಾರಿಯ 10 ನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದ 16 ವರ್ಷದ ಹಫೀಜ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಇಮಾಮ್ ನಿನ್ನೆ ಈ ರೀತಿಯಲ್ಲಿ ಮನವಿ ಮಾಡಿಕೊಂಡಿದ್ದರು.
ಅಸನ್ ಸೊಲ್ ಮತ್ತು ರಾಣಿಗಂಜ್ ಪ್ರದೇಶದಲ್ಲಿ ಭಾನುವಾರ ಮತ್ತು ಸೋಮವಾರ ಉಂಟಾಗಿದ್ದ ಗಲಭೆಯಲ್ಲಿ ಒಬ್ಬರು ಮೃತಪಟ್ಟು, ಇಬ್ಬರು ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


