ದೇಶ

ಅಮೃತಸರ್: ಪಾಕಿಸ್ತಾನಿ ಐಎಸ್ಐ ಗೂಢಚಾರಿಯ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ಓರ್ವನನ್ನು ಭದ್ರತಾ ಪಡೆಗಳು ಪಂಜಾಬ್ ನ ಅಮೃತಸರ್ ನಲ್ಲಿ ಬಂಧಿಸಿದೆ.

ಅಮೃತಸರ್: ಪಾಕಿಸ್ತಾನಿ ಐಎಸ್ಐ ಗೂಢಚಾರಿಯ ಬಂಧನ
ಸಾಂದರ್ಭಿಕ ಚಿತ್ರ
Published On :
ಅಮೃತಸರ್(ಪಂಜಾಬ್): ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ಓರ್ವನನ್ನು ಭದ್ರತಾ ಪಡೆಗಳು ಪಂಜಾಬ್ ನ ಅಮೃತಸರ್ ನಲ್ಲಿ ಬಂಧಿಸಿದೆ.
ರಾಜ್ಯ ವಿಶೇಷ ಕಾರ್ಯಾಚರಣೆ ಪಡೆ ಹಾಗೂ ಮಿಲಿಟರಿ ಗುಪ್ತಚರ  ಸಂಸ್ಥೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ  ಗೂಢಚಾರನನ್ನು ಬಂಧಿಸಲಾಯಿತು. ಬಂಧಿತನನ್ನು ರವಿ ಕುಮಾರ್ ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಸೈನ್ಯದ ವಾಹನಗಳ ಛಾಯಾಚಿತ್ರಗಳು, ಕೈಯಲ್ಲಿ ಬರೆದ ನಿರ್ಬಂಧಿತ ಪ್ರದೇಶಗಳ ನಕಾಶೆಗಳು, ಸೈನ್ಯದ ತರಬೇತಿ ಕೈಪಿಡಿಗಳ ಪ್ರತಿಗಳನ್ನು ಮಿಲಿಟರಿ ವಶಕ್ಕೆ ಪಡೆದುಕೊಂಡಿದ್ದಾರೆ.
ಭಾರತೀಯಸೇನೆಯ ಎಲ್ಲಾ ಪ್ರಮುಖ ಚಲನವಲನಗಳನ್ನು ತಿಳಿಸಲು ಈತನನ್ನು ಪಾಕಿಸ್ತಾನ ಐಎಸ್ಐ ಸಂಸ್ಥೆ ಏಳು ತಿಂಗಳ ಹಿಂದೆ ನೇಮಕ ಮಾಡಿತ್ತು. ದುಬೈ ಮೂಲಕ ಅಕ್ರಮ ಹಣ ವರ್ಗಾವಣೆ ಕೆಲಸದಲ್ಲಿ ಈ ಗೂಢಚಾರಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಅಧಿಕೃತ ಸೀಕ್ರೆಟ್ಸ್ ಆಕ್ಟ್ ಸೇರಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಇತರ  ಕಾಯ್ದೆಗಲಡಿಯಲ್ಲಿ ಈತನ ವಿರುದ್ಧ ಪ್ರಕರಣ ದಾಕಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.