ಹಾಸನದಿಂದ ಕೋಝಿಕೋಡ್ ಗೆ ಸಾಗಿಸುತ್ತಿದ್ದ 3 ಸಾವಿರ ಕೆಜಿ ಸ್ಫೋಟಕ ಕೇರಳದಲ್ಲಿ ವಶಕ್ಕೆ
ಕರ್ನಾಟಕದ ಹಾಸನದಿಂದ ಕೇರಳದ ಕೋಝಿಕೋಡ್ ಕಡೆಗೆ ಹೋಗುತ್ತಿದ್ದ ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು , ಗೆಲಾಟಿನ್ ಕಡ್ಡಿ, ಪ್ಯೂಸ್ ವೈರ್ ಸೇರಿದಂತೆ ಸುಮಾರು 3 ಸಾವಿರ ಕೆ ಜಿ ತೂಕದ ಭಾರೀ ಪ್ರಮಾಣದ ಸ್ಪೋಟಕಗಳನ್ನು ಇಂದು ಮುಂಜಾನೆ ವಶಪಡಿಸಿಕೊಂಡಿದ್ದಾರೆ.

ಕೋಝಿಕೋಡ್ : ಕರ್ನಾಟಕದ ಹಾಸನದಿಂದ ಕೇರಳದ ಕೋಝಿಕೋಡ್ ಕಡೆಗೆ ಹೋಗುತ್ತಿದ್ದ ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು , ಗೆಲಾಟಿನ್ ಕಡ್ಡಿ, ಪ್ಯೂಸ್ ವೈರ್ ಸೇರಿದಂತೆ ಸುಮಾರು 3 ಸಾವಿರ ಕೆ ಜಿ ತೂಕದ ಭಾರೀ ಪ್ರಮಾಣದ ಸ್ಪೋಟಕಗಳನ್ನು ಇಂದು ಮುಂಜಾನೆ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇಬೆಶ್ ಕುಮಾರ್ ಬೆಹೆರಾ ಅವರ ಸೂಚನೆ ಮೇರೆಗೆ ಕೇರಳದ ಮಲ್ಲಾಪುರಂ ಜಿಲ್ಲೆಯ ಮೊಂಗಮ್ ಬಳಿ ಕರ್ನಾಟಕ ನೋಂದಣಿಯ ಲಾರಿಯನ್ನು ಪೊಲೀಸರು ಶೋಧಿಸಿದಾಗ ಭಾರೀ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿವೆ.
ಶೋಧ ವೇಳೆ 10 ಸಾವಿರ ಡಿಟೋನೇಟರ್, 3 ಸಾವಿರದ 750 ಕಿಲೋಗ್ರಾಮ್ ಗಿಲಾಟಿನ್ ಕಡ್ಡಿಗಳು ಹಾಗೂ 213 ಪ್ಯೂಸ್ ವೈರ್ ಗಳನ್ನು ಪಟ್ಟಣಗಳಲ್ಲಿ ಇಟ್ಟಿರುವುದು ಕಂಡುಬಂದಿದೆ.
ಈ ಲಾರಿ ಕರ್ನಾಟಕದ ಹಾಸನದಿಂದ ಕೋಝಿಕೊಡು ಕಡೆಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸರಿಯಾದ ದಾಖಲೆ ಹಾಜರುಪಡಿಸದ ಹಿನ್ನೆಲೆಯಲ್ಲಿ ಸ್ಪೋಟಕ ನಿಯಂತ್ರಣ ಕಾಯ್ದೆಯಡಿ ಇಬ್ಬರು ಲಾರಿ ಚಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಬಂಧಿತರನ್ನು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


