ದೇಶಹಾಸನದಿಂದ ಕೋಝಿಕೋಡ್ ಗೆ ಸಾಗಿಸುತ್ತಿದ್ದ 3 ಸಾವಿರ ಕೆಜಿ ಸ್ಫೋಟಕ ಕೇರಳದಲ್ಲಿ ವಶಕ್ಕೆ
ಕರ್ನಾಟಕದ ಹಾಸನದಿಂದ ಕೇರಳದ ಕೋಝಿಕೋಡ್ ಕಡೆಗೆ ಹೋಗುತ್ತಿದ್ದ ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು , ಗೆಲಾಟಿನ್ ಕಡ್ಡಿ, ಪ್ಯೂಸ್ ವೈರ್ ಸೇರಿದಂತೆ ಸುಮಾರು 3 ಸಾವಿರ ಕೆ ಜಿ ತೂಕದ ಭಾರೀ ಪ್ರಮಾಣದ ಸ್ಪೋಟಕಗಳನ್ನು ಇಂದು ಮುಂಜಾನೆ ವಶಪಡಿಸಿಕೊಂಡಿದ್ದಾರೆ.