ದೇಶ

20 ಎಎಪಿ ಶಾಸಕರ ಅನರ್ಹತೆ ರದ್ದುಪಡಿಸಿದ ದೆಹಲಿ ಹೈಕೋರ್ಟ್; ಸತ್ಯಕ್ಕೆ ಸಂದ ಜಯ ಎಂದ ಕೇಜ್ರಿವಾಲ್

ಲಾಭದಾಯಕ ಹುದ್ದೆ ಹೊಂದಿರುವ 20 ಎಎಪಿ ಶಾಸಕರ ಅನರ್ಹತಪ್ರಕರಣಕ್ಕೆ ಸಂಬಂಧ್ಸಿ ಕೇಂದ್ರದ ಅಧಿಸೂಚನೆಯನ್ನು ದೆಹಲಿ ಹೈಕೋರ್ಟ್ ಅಮಾನ್ಯಮಾಡಿದೆ.

20 ಎಎಪಿ ಶಾಸಕರ ಅನರ್ಹತೆ ರದ್ದುಪಡಿಸಿದ ದೆಹಲಿ ಹೈಕೋರ್ಟ್; ಸತ್ಯಕ್ಕೆ ಸಂದ ಜಯ ಎಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
Published On :
ನವದೆಹಲಿ: ಲಾಭದಾಯಕ ಹುದ್ದೆ ಹೊಂದಿರುವ 20 ಎಎಪಿ ಶಾಸಕರ ಅನರ್ಹತ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರದ ಅಧಿಸೂಚನೆಯನ್ನು ದೆಹಲಿ ಹೈಕೋರ್ಟ್ ಅಮಾನ್ಯಮಾಡಿದೆ.  ಇದರಿಂದ ಅನರ್ಹತೆಯ ಭೀತಿಯಲ್ಲಿದ್ದ ಶಾಸಕರಿಗೆ ತುಸು ನಿರಾಳವಾಗಿದೆ.
ಪ್ರಕರಣ ಸಂಬಂಧ  ಹೊಸದಾಗಿ ವಿಚಾರಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಆದೇಶಿಸಿದೆ. ಆಯೋಗವು ನರ್ಹತೆಗೆ ಮುಂದಾಗುವ ಮುನ್ನ ಶಾಸಕರು ಸರಿಯಾದ  ವಿವರಣೆ ನೀಡಿರಲಿಲ್ಲ. ಇದಕ್ಕಾಗಿ ಮತ್ತೆ ವಿಚಾರಣೆ ನಡೆಸಬೇಕೆಂದು ಆದೇಶಿಸಿ ಪ್ರಕರಣದ ಮರುಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಹೇಳಿದೆ.
ನ್ಯಾಯಾಲಯ ಆದೇಶದಂತೆ ಚುನಾವಣಾ ಆಯೋಗವು ಶಾಸಕರ ಅನರ್ಹತಾ ಪ್ರಕರಣವನ್ನುಮರು ವಿಚಾರಣೆ ನಡೆಸಲು ತಯಾರಾಗಿದೆ.
ಲಾಭದಾಯಕ ಹುದ್ದೆ ಹೊಂದಿದ್ದ ಹಿನ್ನೆಲೆಯಲ್ಲಿ 20 ಎಎಪಿ ಶಾಸಕರ ಅನರ್ಹತೆಗೆ ಚುನಾವಣಾ ಆಯೋಗವು ಜನವರಿ 19ರಂದು ಶಿಪಾರಸು ಮಾಡಿತ್ತು. ಇದಾದ ಮರುದಿನವೇ ಆಯೋಗದ ಶಿಫಾರಸಿಗೆ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ್ದರು.
ಚುನಾವಣಾ ಆಯೋಗದಿಂಡ ಅನರ್ಹತೆಗಾಗಿ ಶಿಫಾರಸು ಮಾಡಲ್ಪಟ್ಟ 20 ಎಎಪಿ ಶಾಸಕರ ಹೆಸರುಗಳು ಇಂತಿದೆ- ಆದರ್ಶ ಶಾಸ್ತ್ರಿ (ದ್ವಾರಕಾ), ಆಲ್ಕಾ ಲಂಬಾ (ಚಾಂದನಿ ಚೌಕ್), ಅನಿಲ್ ಬಾಜ್ಪಾಯಿ (ಗಾಂಧಿ ನಗರ), ಅವತಾರ್ ಸಿಂಗ್ (ಕಲ್ಕಾಜಿ), ಕೈಲಾಶ್ ಗಹ್ಲೋಟ್ (ನಜಫ್ಗಢ್)  ಮದನ್ ಲಾಲ್ (ಕಸ್ತೂರ್ಬಾ ನಗರ) ), ಮನೋಜ್ ಕುಮಾರ್ (ಕೊಂಡ್ಲಿ), ನರೇಶ್ ಯಾದವ್ (ಮೆಹ್ರಾಲಿ), ನಿತಿನ್ ತ್ಯಾಗಿ (ಲಕ್ಷ್ಮಿ ನಗರ), ಪ್ರವೀಣ್ ಕುಮಾರ್ (ಜಂಗ್ಪುರಾ).ರಾಜೇಶ್ ಗುಪ್ತಾ (ವಾಜಿರ್ಪುರ್), ರಾಜೇಶ್ ರಿಷಿ (ಜನಕುಪುರಿ), ಸಂಜೀವ್ ಝಾ (ಬುರಾರಿ), ಸರಿತಾ ಸಿಂಗ್ (ರೋಹಟಾಸ್ ನಗರ), ಸೋಮ್ ದತ್ (ಸದರ್ ಬಜಾರ್), ಶರದ್ ಕುಮಾರ್ (ನರೇಲಾ), ಶಿವ ಚರಣ್ ಗೋಯಲ್ (ಮೋತಿ ನಗರ), ಸುಖ್ವೀರ್ ಸಿಂಗ್ (ಮುಂಡ್ಕಾ), ವಿಜೇಂದರ್ ಗಾರ್ಗ್ (ರಾಜೀಂದರ್ ನಗರ) ಮತ್ತು ಜರ್ನೈಲ್ ಸಿಂಗ್ (ತಿಲಕ್ ನಗರ).
ನ್ಯಾಯಾಲಯದ ತೀರ್ಪು ಬಂದ ಬಳಿಕ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ’ಇದು ಸತ್ಯಕ್ಕೆ ಸಂದ ಜಯ’ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.