ದೇಶ

ಉತ್ತರ ಪ್ರದೇಶ: ಸಹಪಾಠಿಗೆ ಅತ್ಯಾಚಾರ, ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ 9ನೇ ತರಗತಿ ವಿದ್ಯಾರ್ಥಿ

ಸಹಪಾಠಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡುವುದಾಗಿ ಹಾಗೂ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸುವುದಾಗಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಬೆದರಿಕೆಯೊಡ್ಡಿರುವ ಘಟನೆ ಉತ್ತರಪ್ರದೇಶ ರಾಜ್ಯದ ಮೀರತ್ ನಲ್ಲಿ ನಡೆದಿದೆ...

ಉತ್ತರ ಪ್ರದೇಶ: ಸಹಪಾಠಿಗೆ ಅತ್ಯಾಚಾರ, ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ 9ನೇ ತರಗತಿ ವಿದ್ಯಾರ್ಥಿ
ಸಾಂದರ್ಭಿಕ ಚಿತ್ರ
Published On :
ಮೀರುತ್: ಸಹಪಾಠಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡುವುದಾಗಿ ಹಾಗೂ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸುವುದಾಗಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಬೆದರಿಕೆಯೊಡ್ಡಿರುವ ಘಟನೆ ಉತ್ತರಪ್ರದೇಶ ರಾಜ್ಯದ ಮೀರತ್ ನಲ್ಲಿ ನಡೆದಿದೆ. 
ಆರೋಪಿ ಹಲವು ದಿನಗಳಿಂದಲೂ ನನಗೆ ತೊಂದರೆಯನ್ನು ನೀಡುತ್ತಿದ್ದ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂದು ಬಾಲಕಿ ಹೇಳಿದ್ದಾಳೆ. 
ಹಲವು ದಿನಗಳಿಂದ ನನಗೆ ಆತ ತೊಂದರೆ ನೀಡುತ್ತಿದ್ದ. ನನ್ನ ಕೆನ್ನಗೆ ಹೊಡೆದಿದ್ದ. ಇದಾದ ಬಳಿಕ ನನ್ನ ತಂದೆಗೆ ಕರೆ ಮಾಡಿದ್ದ ಆತ ನನ್ನ ಮೇಲೆ ಆ್ಯಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾಳೆ. 
ಪ್ರಕರಣ ಸಂಬಂಧ ಮೀರುತ್ ಎಸ್'ಪಿ ರಾಜೇಶ್ ಕುಮಾರ್ ಅವರು ಮಾತನಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.