ದೇಶ

ಮೇವು ಹಗರಣ: 4ನೇ ಕೇಸ್ ನಲ್ಲಿಯೂ ಲಾಲು ಅಪರಾಧಿ; ಜಗನ್ನಾಥ ಮಿಶ್ರಾ ಖುಲಾಸೆ

ಬಹುಕೋಟಿ ಮೇವು ಹಗರಣದ ನಾಲ್ಕನೇ ಕೇಸ್ ನಲ್ಲಿಯೂ ಬಿಹಾರ ಮಾಜಿ ಸಿಎಂ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ..

ಮೇವು ಹಗರಣ: 4ನೇ ಕೇಸ್ ನಲ್ಲಿಯೂ ಲಾಲು ಅಪರಾಧಿ; ಜಗನ್ನಾಥ ಮಿಶ್ರಾ ಖುಲಾಸೆ
ಲಾಲೂ ಪ್ರಸಾದ್ ಯಾದವ್
Published On :
ರಾಂಚಿ: ಬಹುಕೋಟಿ ಮೇವು ಹಗರಣದ ನಾಲ್ಕನೇ ಕೇಸ್ ನಲ್ಲಿಯೂ ಬಿಹಾರ ಮಾಜಿ ಸಿಎಂ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್  ಅವರನ್ನು ದೋಷಿ ಎಂದು ರಾಂಚಿಯ ಜಾರ್ಖಂಡ್  ಕೋರ್ಟ್ ತೀರ್ಪು ನೀಡಿದೆ.
ಇನ್ನೂ ಮತ್ತೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ನಿಕಟವರ್ತಿ ಜಗನ್ನಾಥ್ ಮಿಶ್ರಾ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಲಾಗಿದೆ.
ಜಗನಾಥ್ ಮಿಶ್ರಾ ಮತ್ತು ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಯಿಂದ ನೇರವಾಗಿ ಕೋರ್ಟ್ ಗೆ ಆಗಮಿಸಿದ್ದರು.
ಬಿಹಾರ ಸರ್ಕಾರದ ನಿಧಿಯನ್ನು ಬಳಸಿಕೊಂಡು  ಬಹುಕೋಟಿ ಮೇವು ಹಗರಣದಲ್ಲಿ ಸಿಲುಕಿಕೊಂಡಿದ್ದರು. 1990 ರಲ್ಲಿ ಲಾಲು ಪ್ರಸಾದ್ ಯಾದವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಹಗರಣ ನಡೆದಿತ್ತು.
ಲಾಲೂ ಪ್ರಸಾದ್, ಜಗನ್ನಾಥ್ ಮಿಶ್ರಾ ಸೇರಿದಂತೆ 30 ಮಂದಿಯನ್ನು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಮೊದಲ ಕೇಸ್ ನಲ್ಲಿ ಅಂದರೇ 2013 ರಲ್ಲಿ ನೀಡಿದ ತೀರ್ಪಿನಲ್ಲಿ  ಲಾಲೂ ಪ್ರಸಾದ್ ಯಾದವ್ ಅವರಿಗೆ 5 ವರ್ಷ ಜೈಲು ಶಿಕ್ಷೆಯಾಗಿತ್ತು, ಮೂರನೇ ಪ್ರಕರಣ ಸಂಬಂಧ ಜನವರಿಯಲ್ಲಿ ಶಿಕ್ಷೆ ನೀಡಲಾಗಿತ್ತು. ಮೇವು ಹಗರಣವನ್ನು ಸಿಬಿಐ ನಿಂದ ಪಾಟ್ನಾ ಹೈಕೋರ್ಟ್ ಗೆ ವರ್ಗಾವಣೆ ಮಾಡಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.