ತಿರುಪತಿ ಹುಂಡಿ ಲೆಕ್ಕ ಹಾಕುವವರು ಕೂಡ ನಿಮಗಿಂತ ವೇಗವಾಗಿ ಹಣ ಎಣಿಸುತ್ತಾರೆ: ಆರ್ ಬಿಐ, ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ
ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು, ತಿರುಪತಿ ಹುಂಡಿ ಲೆಕ್ಕ ಹಾಕುವವರು ಕೂಡ ನಿಮಗಿಂತ ವೇಗವಾಗಿ ಹಣ ಎಣಿಸುತ್ತಾರೆ ಎಂದು ಹೇಳಿದ್ದಾರೆ.

Published On :
ನವದೆಹಲಿ: ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರು, ತಿರುಪತಿ ಹುಂಡಿ ಲೆಕ್ಕ ಹಾಕುವವರು ಕೂಡ ನಿಮಗಿಂತ ವೇಗವಾಗಿ ಹಣ ಎಣಿಸುತ್ತಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 84ನೇ ಮಹಾಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಚಿದಂಬರಂ, "ಅಮಾನ್ಯಗೊಂಡ 500, 1000 ರೂ, ಮುಖಬೆಲೆಯ ನೋಟುಗಳನ್ನು ಇದುವರೆಗೂ ಲೆಕ್ಕ ಹಾಕಲು ಆರ್ ಬಿಐ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ತಿರುಪತಿಯ ಹುಂಡಿ ಲೆಕ್ಕ ಹಾಕುವವರು ನಿಮಗಿಂತ ವೇಗವಾಗಿ ಹಣ ಲೆಕ್ಕಿಸುತ್ತಾರೆ. ಈ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ ಏನು ಮಾಡಿತು" ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಇನ್ನು ನೋಟು ಅಮಾನ್ಯಗೊಂಡ ಬಳಿಕ ಈ ವರೆಗೂ ಆರ್ ಬಿಐ ಸೇರಿರುವ ಹಳೆಯ ನೋಟುಗಳ ಪ್ರಮಾಣವೆಷ್ಟು ಎಂಬುದರ ಕುರಿತು ಆರ್ ಬಿಐ ಖಚಿತ ಮಾಹಿತಿ ನೀಡಿಲ್ಲ. ಹೀಗಾಗಿ ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಅಮಾನ್ಯಗೊಂಡ 500 ಹಾಗು 1000 ರೂ. ಮುಖಬೆಲೆಯ ನೋಟುಗಳನ್ನು ಲೆಕ್ಕ ಹಾಕಲು 66 ಸಿವಿಪಿಎಸ್ ಮಷಿನ್ ಗಳನ್ನು ಬಳಸಲಾಗುತ್ತಿದೆ ಎಂದು ಆರ್ ಬಿಐ ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhiಪಿ ಚಿದಂಬರಂPM Modiಪ್ರಧಾನಿ ಮೋದಿChidambaramdemonetizationನೋಟು ನಿಷೇಧ84th Congress plenary session84ನೇ ಕಾಂಗ್ರೆಸ್ ಮಹಾಧಿವೇಶನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


