ದೇಶ

ದಲೇರ್ ಮೆಹಂದಿ ವಿರುದ್ಧ ಮಾನವ ಕಳ್ಳಸಾಗಣೆ ಆರೋಪ ಸಾಬೀತು; 2 ವರ್ಷ ಜೈಲು ಶಿಕ್ಷೆ; ಜಾಮೀನು ಮಂಜೂರು

ಗಾಯಕ ದಲೇರ್ ಮೆಹಂದಿ ವಿರುದ್ಧದ ಮಾನವ ಕಳ್ಳಸಾಗಣೆ ಆರೋಪ ಸಾಬೀತಾಗಿದ್ದು, ಅಪರಾಧಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ದಲೇರ್ ಮೆಹಂದಿ ವಿರುದ್ಧ ಮಾನವ ಕಳ್ಳಸಾಗಣೆ ಆರೋಪ ಸಾಬೀತು; 2 ವರ್ಷ ಜೈಲು ಶಿಕ್ಷೆ; ಜಾಮೀನು ಮಂಜೂರು
ದಲೇರ್ ಮೆಹಂದಿ ವಿರುದ್ಧದ ಮಾನವ ಕಳ್ಳಸಾಗಣೆ ಆರೋಪ ಸಾಬೀತು; ಜಾಮೀನು
Published On :
ಪಂಜಾಬ್: ಗಾಯಕ ದಲೇರ್ ಮೆಹಂದಿ ವಿರುದ್ಧದ ಮಾನವ ಕಳ್ಳಸಾಗಣೆ ಆರೋಪ ಸಾಬೀತಾಗಿದ್ದು, ಅಪರಾಧಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. 
ಇತ್ತೀಚಿನ ವರದಿ ಪ್ರಕಾರ, ಶಿಕ್ಷೆ ಪ್ರಕಟವಾದ ಬೆನ್ನೆಲ್ಲೇ ಗಾಯಕ ದಲೇರ್ ಮೆಹಂದಿ ಗೆ ಜಾಮೀನೂ ಸಹ ಮಂಜೂರಾಗಿದೆ.  ಮೆಹಂದಿ ಹಾಗೂ ಆತನ ಸಹೋದರ ಶಂಶೀರ್ ಸಿಂಗ್ ಇಬ್ಬರ ವಿರುದ್ಧವೂ ಮಾನವ ಕಳ್ಳಸಾಗಣೆ ಆರೋಪ ಕೇಳಿಬಂದಿತ್ತು.  ಮೆಹಂದಿ ಹಾಗೂ ಆತನ ಸಹೋದರ ವ್ಯಕ್ತಿಗಳನ್ನು ತಮ್ಮ ತಂಡದ ಸದಸ್ಯರ ಮಾರುವೇಷದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿತ್ತು. 
ಪಂಜಾಬ್ ನ ಪಟಿಯಾಲ ನ್ಯಾಯಾಲಯ ಮೆಹಂದಿ ಹಾಗೂ ಆತನ ಸಹೋದರನನ್ನು ಅಪರಾಧಿಗಳೆಂದು ಘೋಷಿಸಿದ್ದು, 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಪಂಜಾಬ್ ನ ಬಕ್ಷ್ಶಿಶ್ ಸಿಂಗ್ ಎಂಬ ವ್ಯಕ್ತಿಯ ದೂರನ್ನು ಆಧರಿಸಿ 2013 ರಲ್ಲಿ ಪಟಿಯಾಲಾ ಪೊಲೀಸರು ಪ್ರಕರಣ ದಾಖಲಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.