ಜಯಾ ಬಚ್ಚನ್ ಕುರಿತು ನರೇಶ್ ಅಗರ್ವಾಲ್ ಹೇಳಿಕೆ: ಅಖಿಲೇಶ್ ಯಾದವ್ ತೀವ್ರ ಖಂಡನೆ
ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಾ ಬಚ್ಚನ್ ಕುರಿತಂತೆ ನರೇಶ್ ಅಗರ್ವಾಲ್ ಅವರು ನೀಡಿದ್ದ ಹೇಳಿಕೆಯನ್ನು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮಂಗಳವಾರ ತೀವ್ರವಾಗಿ ಖಂಡಿಸಿದ್ದಾರೆ...

Published On :
ಲಖನೌ: ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಾ ಬಚ್ಚನ್ ಕುರಿತಂತೆ ನರೇಶ್ ಅಗರ್ವಾಲ್ ಅವರು ನೀಡಿದ್ದ ಹೇಳಿಕೆಯನ್ನು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮಂಗಳವಾರ ತೀವ್ರವಾಗಿ ಖಂಡಿಸಿದ್ದಾರೆ.
ನರೇಶ್ ಅವರ ಹೇಳಿಕೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನರೇಶ್ ಅವಹ ಅವಹೇಳನಕಾರಿ ಹೇಳಿಕೆ ಬಾಲಿವುಡ್ ಸೋದರತ್ವವಷ್ಟೇ ಅಲ್ಲದೆ, ದೇಶದಲ್ಲಿರುವ ಎಲ್ಲಾ ಮಹಿಳೆಯರಿಗೂ ಅವಮಾನ ಮಾಡಿದಂತಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಮಹಿಳೆಯರಿಗೆ ಬಿಜೆಪಿ ನಿಜಕ್ಕೂ ಗೌರವವನ್ನು ನೀಡುವುದೇ ಆದರೆ, ನರೇಶ್ ಯಾದವ್ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಜಯಾ ಬಚ್ಚನ್ ವಿರುದ್ದ ಬಿಜೆಪಿ ನಾಯಕ ನರೇಶ್ ಅಗರ್ವಾಲ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸುತ್ತೇನೆ. ಬಾಲಿವುಡ್ ಸೇರಿದಂತೆ ದೇಶದ ಎಲ್ಲಾ ಮಹಿಳೆಯರಿಗೂ ನರೇಶ್ ಅವರು ಅವಮಾನ ಮಾಡಿದ್ದಾರೆ. ಬಿಜೆಪಿ ಅಷ್ಟೇ ಅಲ್ಲದೆ, ಮಹಿಳಾ ಆಯೋಗ ನರೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷವು ಅಗರ್ವಾಲ್ ಬದಲಿಗೆ ಜಯಾ ಬಚ್ಚನ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿತ್ತು. ಇದಕ್ಕೆ ಪ್ರತಿಕ್ರಯಿಸಿದ ನರೇಶ್ ಅಗರ್ವಾಲ್ ’ಚಲನಚಿತ್ರಗಳಲ್ಲಿ ನೃತ್ಯ ಮಾಡುವ, ನಟನೆ ಮಾಡುವವರನ್ನು ಬೆಂಬಲಿಸಿದ ಪಕ್ಷ ನನ್ನನ್ನು ಕಡೆಗಣಿಸಿತು’ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿಜಯಾ ಬಚ್ಚನ್Jaya BachchanUttar pradeshಉತ್ತರಪ್ರದೇಶAkhilesh Yadavಅಖಿಲೇಶ್ ಯಾದವ್Naresh Agarwalನರೇಶ್ ಅಗರ್ವಾಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


