ದೇಶ

ಕಾರ್ಯಕರ್ತರ ಸಾವಿಗೆ ಜನ ಖಂಡಿತ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸುತ್ತಾರೆ: ಅನಂತ್ ಕುಮಾರ್

ತ್ರಿಪುರಾದಲ್ಲಿ 9 ಮಂದಿ ಬಿಜೆಪಿ ಕಾರ್ಯರ್ತರ ಹತ್ಯೆಯಾಗಿದ್ದಕ್ಕೇ ತ್ರಿಪುರಾ ವಿಧಾನಸಭಾ ಚುನಾವಣಯಲ್ಲಿ ಜನ ಪಾಠ ಕಲಿಸಿದ್ದಾರೆ. ಇನ್ನು 24 ಮಂದಿ ಕಾರ್ಯಕರ್ತ ಸಾವಿಗೆ ಕಾರಣವಾದ ಕಾಂಗ್ರೆಸ್ ಸರ್ಕಾರದ ವಿರುದ್ಧ...

ಕಾರ್ಯಕರ್ತರ ಸಾವಿಗೆ ಜನ ಖಂಡಿತ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸುತ್ತಾರೆ: ಅನಂತ್ ಕುಮಾರ್
ಶಿಲ್ಲಾಂಗ್ ನಲ್ಲಿ ಅನಂತ್ ಕುಮಾರ್
Published On :
ಶಿಲ್ಲಾಂಗ್: ತ್ರಿಪುರಾದಲ್ಲಿ 9 ಮಂದಿ ಬಿಜೆಪಿ ಕಾರ್ಯರ್ತರ ಹತ್ಯೆಯಾಗಿದ್ದಕ್ಕೇ ತ್ರಿಪುರಾ ವಿಧಾನಸಭಾ ಚುನಾವಣಯಲ್ಲಿ ಜನ ಪಾಠ ಕಲಿಸಿದ್ದಾರೆ. ಇನ್ನು 24 ಮಂದಿ ಕಾರ್ಯಕರ್ತ ಸಾವಿಗೆ ಕಾರಣವಾದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಖಂಡಿತಾ ಕರ್ನಾಟಕದ ಜನ ತಿರುಗಿ ಬೀಳುತ್ತಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಮೇಘಾಲಯದ ಶಿಲ್ಲಾಂಗ್ ನಲ್ಲಿ ಇಂದು ನಡೆದ ಎನ್ ಪಿಪಿಯ ಕನ್ರಾಡ್ ಸಂಗ್ಮಾ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕಮಾರ್ ಅವರು, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಖಂಡಿತ ಜನ ತಿರುಗಿ ಬೀಳುತ್ತಾರೆ. ಖಂಡಿತಾ ಮುಂಬುರವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಹೇಳಿದರು.
"ತ್ರಿಪುರಾದಲ್ಲಿ ಮಾರ್ಕ್ಸಿಸ್ಟ್ ಗಳು 9 ಮಂದಿ ಬಿಜೆಪಿ ಕಾರ್ಯಕರ್ತ ಹತ್ಯೆ ಮಾಡಿದ್ದರು. ಆದರೆ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಏನಾಯ್ತು.. ಕಮ್ಯೂನಿಸ್ಟ್ ಪಕ್ಷಗಳು ಚುನಾವಣೆಯಲ್ಲಿ ಹೇಳಹೆಸರಿಲ್ಲದಂತೆ ಮಕಾಡೆ ಮಲಗಿದವು. ಕಮ್ಯೂನಿಸ್ಟರ ಕಪಿಮುಷ್ಟಿಯಲ್ಲಿದ್ದ ತ್ರಿಪುರಾದಲ್ಲಿ ಬಿಜೆಪಿ ಪ್ರಜಾಪ್ರಭುತ್ವ ಸ್ಥಾಪಿಸಿದೆ. ಅಂತೆಯೇ ಕರ್ನಾಕದಲ್ಲಿ 24 ಮಂದಿ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಹಾಗಾದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಏನು? ಖಂಡಿತ ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಜನ ಬುದ್ಧಿ ಕಲಿಸುತ್ತಾರೆ ಎಂದು ಅನಂತ್ ಕುಮಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.