3,200 ಕೋಟಿ ರು. ಟಿಡಿಎಸ್ ಹಗರಣ ಬಯಲಿಗೆಳೆದ ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ ಬರೊಬ್ಬರಿ 3,200 ಕೋಟಿ ರುಪಾಯಿಯ ಟಿಡಿಎಸ್ ಹಗರಣವನ್ನು ಬಯಲಿಗೆಳೆದಿದೆ.

Published On :
ಮುಂಬೈ: ಆದಾಯ ತೆರಿಗೆ ಇಲಾಖೆ ಬರೊಬ್ಬರಿ 3,200 ಕೋಟಿ ರುಪಾಯಿಯ ಟಿಡಿಎಸ್ ಹಗರಣವನ್ನು ಬಯಲಿಗೆಳೆದಿದೆ.
447 ಕಂಪನಿಗಳು ತಮ್ಮ ಉದ್ಯೋಗಿಗಳ ಸಂಬಳದಿಂದ ಟಿಡಿಎಸ್ ಕಡಿತಗೊಳಿಸಿದ್ದವು, ಆದರೆ ಆ ಹಣವನ್ನು ಐಟಿ ಇಲಾಖೆಯಲ್ಲಿ ಠೇವಣಿ ಇಡದೆ ತಮ್ಮ ವ್ಯವಹಾರಕ್ಕೆ ಬಳಸಿಕೊಂಡಿರುವುದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ.
ಆದಾಯ ತೆರಿಗೆ ಇಲಾಖೆಯ ಟಿಡಿಎಸ್ ಘಟಕ ಈ 447 ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿದ್ದು, ಕೆಲವು ಕಂಪನಿಗಳಿಗೆ ವಾರಂಟ್ ಜಾರಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಕಾಯ್ದೆ ಪ್ರಕಾರ ಆರೋಪ ಸಾಬೀತಾದರೆ 3ರಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ ಎಂದು ವರದಿ ವಿವರಿಸಿದೆ. ಸೆಕ್ಷನ್ 276 ಬಿ ಅಡಿಯಲ್ಲಿ ವಿಚಾರಣೆ ಆರಂಭಿಸಲಾಗಿದೆ.
ಈ ಹಗರಣದಲ್ಲಿ ರಾಜಕೀಯ ನಂಟು ಹೊಂದಿರುವ, ಪ್ರಭಾವಶಾಲಿ ಬಿಲ್ಡರ್ ವೊಬ್ಬ ಸೇರಿದ್ದು, ಆತ ಉದ್ಯೋಗಿಗಳಿಂದ ಕಡಿತಗೊಳಿಸಿದ್ದ ಸುಮಾರು 100 ಕೋಟಿ ರೂ. ಟಿಡಿಎಸ್ ಹಣವನ್ನು ತನ್ನ ಸ್ವಂತ ವ್ಯವಹಾರಕ್ಕೆ ಬಳಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


