ರೈಲಿನಲ್ಲೇ ವಿವಾಹವಾದ ಜೋಡಿ: ರವಿಶಂಕರ್ ಗುರೂಜಿ ಸಾಕ್ಷಿ
ಚಲಿಸುತ್ತಿರುವ ರೈಲಿನಲ್ಲಿಯೇ ಜೋಡಿಯೊಂದು ವಿವಾಹವಾಗಿರುವ ವಿಶೇಷ ಪ್ರಸಂಗವೊಂದು ಉತ್ತರಪ್ರದೇಶದ ಗೋರಖ್ಪುರ ಮತ್ತು ಲಖನೌ ನಡುವೆ ಗುರುವಾರ ನಡೆದಿದೆ...

Published On :
ನವದೆಹಲಿ; ಚಲಿಸುತ್ತಿರುವ ರೈಲಿನಲ್ಲಿಯೇ ಜೋಡಿಯೊಂದು ವಿವಾಹವಾಗಿರುವ ವಿಶೇಷ ಪ್ರಸಂಗವೊಂದು ಉತ್ತರಪ್ರದೇಶದ ಗೋರಖ್ಪುರ ಮತ್ತು ಲಖನೌ ನಡುವೆ ಗುರುವಾರ ನಡೆದಿದೆ.
ಈ ವಿಶೇಷ ವಿವಾಹಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಸಾಕ್ಷಿಯಾದರು.
ಫಾರ್ಮಾಸಿಸ್ಟ್ ಸಚಿನ್ ಕುಮಾರ್ ಮತ್ತು ತೆರಿಗೆ ಇಲಾಖೆ ಉದ್ಯೋಗಿ ಜ್ಯೋತ್ಸ್ನಾ ಸಿಂಗ್ ಪಟೇಲ್ ಚಲಿಸುತ್ತಿರುವ ರೈಲಿನಲ್ಲಿಯೇ ಸರಳ ವಿವಾಹವಾದ ಜೋಡಿಗಳಾಗಿದ್ದಾರೆ.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಚಲಿಸುತ್ತಿರುವ ರೈಲಿನಲ್ಲಿ ಸರಳ ವಿವಾಹವಾಗಿದ್ದು, ಎಲ್ಲರಿಗೂ ಈ ಸಂದೇಶವನ್ನು ತಿಳಿಸಲು ನಾನು ಇಚ್ಛಿಸುತ್ತೇನೆಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ರವಿಶಂಕರ್ ಗುರೂಜಿಯವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಸಂದೇಶ ಹಾಗೂ ಫೋಟೋವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೂ ಟ್ಯಾಗ್ ಮಾಡಿದ್ದಾರೆ.
ವಿವಾಹಕ್ಕೆ ರವಿಶಂಕರ್ ಗುರೂಜಿಯವರಿಗೆ ಆಹ್ವಾನ ನೀಡಲಾಗಿತ್ತೇ ಅಥವಾ ಪ್ರಯಾಣದ ವೇಳೆ ಸರಳ ವಿವಾಹಕ್ಕೆ ಸಾಕ್ಷಿಯಾಗಿದ್ದರೇ ಎಂಬುದು ಸ್ಪಷ್ಟವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MarriageವಿವಾಹUttar pradeshಉತ್ತರಪ್ರದೇಶರೈಲುcoupleSri Sri Ravi ShankarRailಜೋಡಿಶ್ರೀ ಶ್ರೀ ರವಿ ಶಂಕರ್ ಗುರೂಜಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


