ದೇಶ

ಸ್ಟೆರ್ಲೈಟ್ ತಾಮ್ರ ಘಟಕ ಮುಚ್ಚುವುದಕ್ಕೆ ಆದ್ಯಾತ್ಮ ಗುರು ಜಗ್ಗಿ ವಾಸುದೇವ್ ವಿರೋಧ!

ಸದ್ಗುರು ಎಂದೇ ಪ್ರಸಿದ್ದರಾಗಿರುವ ಆದ್ಯಾತ್ಮಿಕ ಗುರು ಜಗ್ಗಿ ವಾಸುದೇವ್, ವೇದಾಂತ ಗ್ರೂಪ್ ನ ಸ್ಟೆರ್ಲೈಟ್ ತಾಮ್ರ ಘಟಕ ಮುಚ್ಚುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ....

ಸ್ಟೆರ್ಲೈಟ್ ತಾಮ್ರ ಘಟಕ ಮುಚ್ಚುವುದಕ್ಕೆ ಆದ್ಯಾತ್ಮ ಗುರು ಜಗ್ಗಿ ವಾಸುದೇವ್ ವಿರೋಧ!
ಜಗ್ಗಿ ವಾಸುದೇವ್
Published On :
ಚೆನ್ನೈ: ಸದ್ಗುರು ಎಂದೇ ಪ್ರಸಿದ್ದರಾಗಿರುವ  ಆದ್ಯಾತ್ಮಿಕ ಗುರು ಜಗ್ಗಿ ವಾಸುದೇವ್, ವೇದಾಂತ ಗ್ರೂಪ್ ನ  ಸ್ಟೆರ್ಲೈಟ್ ತಾಮ್ರ ಘಟಕ ಮುಚ್ಚುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ತಾಮ್ರ ಘಟಕ ಮುಚ್ಚುವುದು ಆರ್ಥಿಕತೆಯ ಆತ್ಮಹತ್ಯೆ ಎಂದು ಆರೋಪಿಸಿದ್ದಾರೆ.
ನಾನು ತಾಮ್ರ ಉತ್ಪಾದನೆಯಲ್ಲಿ ತಜ್ಞನಲ್ಲ, ಆದೆರ ಭಾರತಗದಲ್ಲಿ ತಾಮ್ರದ ಬಳಕೆ ಅಪಾರವಾಗಿದೆ ಎಂಬ ಬಗ್ಗೆ ನನಗೆ ತಿಳಿದಿದೆ, ನಮಗೆ ಅಗತ್ಯವಿರುವ ತಾಮ್ರವನ್ನು ನಾವು ಉತ್ಪಾದಿಸಿಕೊಳ್ಳದಿದ್ದರೇ ನಾವು ಆದನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಕಾನೂನು ಬದ್ಧವಾಗಿ ಪರಿಸರ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ತೂತುಕುಡಿ ಪ್ರತಿಭಟನೆಗೆ ಸಂಬಂಧಿಸಿದಂತೆ ನೀಡಿದ ಸಂದರ್ಶನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ, ವೇದಾಂತ ಗ್ರೂಪ್ ನ ಮಾಲೀಕ ಅನಿಲ್ ಅಗರ್ ವಾಲ್ ಅವರನ್ನು ಲಂಡನ್ ನಲ್ಲಿ ಭೇಟಿ ಮಾಡಿದ್ದಾಗಿ ಯೋಗಗುರು ಬಾಬಾರಾಮದೇವ್ ಟ್ವೀಟ್ ಮಾಡಿದ್ದಾರೆ, ದೇಶಕ್ಕೆ ಅಗರ್ ವಾಲ್ ನೀಡಿದ ಕೊಡುಗೆ ಬಗ್ಗೆ ಶ್ಲಾಘಿಸಿದ್ದಾರೆ, ದೇಶ ಕಟ್ಟುವ ನಿಟ್ಟಿನಲ್ಲಿ ಅವರ ಕೊಡುಗೆ ಅಮೂಲ್ಯವಾದದದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಸಿಸಿದ್ದಾರೆ ಎಂದು  ಟ್ವಿಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.