ದೇಶ

ಕಟ್ಟೆಚ್ಚರ: 35 ಲಷ್ಕರ್ ಉಗ್ರರು ಗಡಿ ನುಸುಳಲು ಸಿದ್ಧರಾಗಿದ್ದಾರೆ: ಗುಪ್ತಚರ ದಳ

ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗಲು 35ಕ್ಕೂ ಹೆಚ್ಚು ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರರು ಗಡಿ ನುಸುಳಿ ಬರಲು ಕಾಯುತ್ತಿದ್ದಾರೆ ಎಂದು ಗುಪ್ತಚರ ದಳ ಎಚ್ಚರಿಸಿದೆ...

ಕಟ್ಟೆಚ್ಚರ: 35 ಲಷ್ಕರ್ ಉಗ್ರರು ಗಡಿ ನುಸುಳಲು ಸಿದ್ಧರಾಗಿದ್ದಾರೆ: ಗುಪ್ತಚರ ದಳ
ಭಯೋತ್ಪಾದಕರು
Published On :
ಶ್ರೀನಗರ: ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗಲು 35ಕ್ಕೂ ಹೆಚ್ಚು ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರರು ಗಡಿ ನುಸುಳಿ ಬರಲು ಕಾಯುತ್ತಿದ್ದಾರೆ ಎಂದು ಗುಪ್ತಚರ ದಳ ಎಚ್ಚರಿಸಿದೆ. 
ಜಮ್ಮು ಮತ್ತು ಕಾಶ್ಮೀರದ ನಾಲ್ಕು ಕಡೆಗಳಿಂದ ಗಡಿ ದಾಟಿ ಒಳ ನುಸುಳಲು ಕನಿಷ್ಠ 35 ಲಷ್ಕರ್ ಉಗ್ರರು ಸಿದ್ಧರಾಗಿ ನಿಂತಿದ್ದಾರೆ ಎಂದು ಗುಪ್ತಚರ ದಳ ಹೇಳಿದೆ. 
ಮಾಚಿಲ್ ಎದುರು ಭಾಗದಲ್ಲಿರುವ ಶಾರ್ಡಿ ಎಂಬಲ್ಲಿನ ಗಡಿ ಪ್ರದೇಶದಲ್ಲಿ 18 ಎಲ್ಇಟಿ ಉಗ್ರರು ಜಮಾಯಿಸಿದ್ದಾರೆ. ಇನ್ನು ನೌಗಾಂವ್ ಎದುರಿನ ಲೀಪಾ ಎಂಬಲ್ಲಿಂದ ಒಳನುಸುಳಲು 8 ಉಗ್ರರು ಹೊಂಚು ಹಾಕಿ ಕುಳಿತಿದ್ದಾರೆ. 
ಇದೇ ವೇಳೆ ಪೂಂಚ್ ನ ಕಾಲು ದೀ ಧೇರಿ ಎಂಬಲ್ಲಿ 6 ಉಗ್ರರು, ಕೋಟ್ ಲೀ ಪ್ರದೇಶದಲ್ಲಿ 3 ಉಗ್ರರು ಗಡಿ ನುಸುಳಲು ಸಿದ್ಧರಾಗಿದ್ದರೆ ಎಂದು ಗುಪ್ತಚರ ದಳ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.