ಒಳನುಸುಳುವಿಕೆ

ಜಮ್ಮು-ಕಾಶ್ಮೀರ: ಕುಪ್ವಾರಾದಲ್ಲಿ ಒಳನುಸುಳುವಿಕೆ ಯತ್ನ; ಭದ್ರತಾ ಪಡೆಗಳಿಂದ ಇಬ್ಬರು ಭಯೋತ್ಪಾದಕರ ಹತ್ಯೆ
ಸೋಮವಾರ ರಾತ್ರಿ ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿ ಅನುಮಾನಾಸ್ಪಾದ ಚಲನವಲನಗಳನ್ನು ಗಮನಿಸಿದ ಭದ್ರತಾ ಪಡೆಗಳು, ದಾಳಿ ನಡೆಸಿವೆ. ಈ ವೇಳೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

LOC ಬಳಿ ಭಾರತಕ್ಕೆ ನುಸುಳಲು ಉಗ್ರರು ಸಜ್ಜಾಗಿ ನಿಂತಿದ್ದಾರೆ: BSF ಎಚ್ಚರಿಕೆ
ಹಿಮಪಾತ ಆರಂಭಕ್ಕೂ ಮುನ್ನ ಗಡಿ ನುಸುಳುವ ಪ್ರಯತ್ನಗಳು ನಡೆಯುತ್ತಿರುತ್ತವೆ. ನವೆಂಬರ್ ವರೆಗೂ ಉಗ್ರರ ಒಳನುಸುಳುವಿಕೆ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಗಡಿ ಬಳಿ ಹೆಚ್ಚಿನ ಉಗ್ರರು ಸಜ್ಜಾಗಿ ನಿಂತಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರ: ಉರಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ; ಓರ್ವ ಯೋಧ ಹುತಾತ್ಮ
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಚುರುಂಡಾ ಪ್ರದೇಶದಲ್ಲಿ ಪಡೆಗಳು ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿವೆ ಎಂದು ಅವರು ಹೇಳಿದರು.

ಜಮ್ಮು-ಕಾಶ್ಮೀರದ ಸಾಂಬಾದಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF
ಕಳೆದ ರಾತ್ರಿ 11 ಗಂಟೆ ಸುಮಾರಿಗೆ, ಜಮ್ಮು- ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಳನುಸುಳುವಿಕೆ ತಡೆಯಿಂದ ಮಾತ್ರ ಪಶ್ಚಿಮ ಬಂಗಾಳದಲ್ಲಿ ಶಾಂತಿ ನೆಲಸಲು ಸಾಧ್ಯ: ಅಮಿತ್ ಶಾ
'ಪಶ್ಚಿಮ ಬಂಗಾಳದಲ್ಲಿ ಶಾಂತಿ ನೆಲಸಲು ಗಡಿಗಳಲ್ಲಿ ನುಸುಳುವಿಕೆ ಮೇಲೆ ನಿಯಂತ್ರಣ ಸಾಧಿಸುವುದು ಅತ್ಯಗತ್ಯವಾಗಿದೆ. 2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸೆಯನ್ನು ತಡೆಯಲಾಗುವುದು ಎಂದು ತಿಳಿಸಿದರು.

ಭಯೋತ್ಪಾದನೆ, ಒಳನುಸುಳುವಿಕೆ, ಧಾರ್ಮಿಕ ಉದ್ವಿಗ್ನತೆ ವಿರುದ್ಧ ಹೋರಾಟ ಮುಂದುವರಿಯಲಿದೆ: ಅಮಿತ್ ಶಾ
ಸ್ವಾತಂತ್ರ್ಯ ನಂತರ ಇದುವರೆಗೆ 36,438 ಪೊಲೀಸ್ ಸಿಬ್ಬಂದಿ ದೇಶದ ಸುರಕ್ಷತೆ ಮತ್ತು ಭದ್ರತೆಗಾಗಿ ಹುತಾತ್ಮರಾಗಿದ್ದಾರೆ. ಕಳೆದ ವರ್ಷವೇ 216 ಮಂದಿ ಪ್ರಾಣ ಅರ್ಪಿಸಿದ್ದಾರೆ ಎಂದರು.

ಎಲ್‌ಒಸಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಭದ್ರತಾ ಪಡೆ: ಕುಪ್ವಾರದಲ್ಲಿ ಇಬ್ಬರು ಉಗ್ರರ ಹತ್ಯೆ
ಕುಪ್ವಾರದ ಗುಗಲ್‌ಧಾರ್‌ನಲ್ಲಿ ಪಡೆಗಳು ಅನುಮಾನಾಸ್ಪದ ಚಟುವಟಿಕೆ ಕಂಡುಬಂದಾಗ ಗುಂಡಿನ ಕಾಳಗ ನಡೆಯಿತು ಎಂದು ಕಾರ್ಪ್ಸ್ ಈ ಹಿಂದೆ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿತ್ತು.

ಜಮ್ಮು-ಕಾಶ್ಮೀರ: ಒಳನುಸುಳುವಿಕೆ ತಡೆಯಲು 960 ಯುವ ನೇಮಕಾತಿಗಳ ಹೊಸ ಪಡೆ ನಿಯೋಜನೆ
ಹೊಸದಾಗಿ ನೇಮಕಗೊಂಡ 960 ಪೊಲೀಸರಲ್ಲಿ 560 ಮಂದಿಯನ್ನು ಜಮ್ಮುವಿನ ಗಡಿ ಪ್ರದೇಶಗಳಲ್ಲಿ ಮತ್ತು ಉಳಿದವರನ್ನು ಕಣಿವೆಯ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ: ಒಳನುಸುಳುವಿಕೆ ಯತ್ನ ವಿಫಲ, ಓರ್ವ ಉಗ್ರನ ಸದೆಬಡಿದ ಸೇನಾಪಡೆ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿ, ಓರ್ವ ಉಗ್ರನನ್ನು ಹತ್ಯೆ ಮಾಡಿದೆ.

