ದೇಶ

ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಂಪಿಯಾಡ್ ನಲ್ಲಿ ಭಾರತಕ್ಕೆ 5 ಚಿನ್ನದ ಪದಕ!

ಅಂತಾರಾಷ್ಟ್ರೀಯ ಫಿಸಿಕ್ಸ್ ಒಲಂಪಿಯಾಡ್ 2018 ರಲ್ಲಿ ಭಾರತದ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದು, 5 ಚಿನ್ನದ ಪದಕ ಗೆದ್ದಿದ್ದಾರೆ.

ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಂಪಿಯಾಡ್ ನಲ್ಲಿ ಭಾರತಕ್ಕೆ 5 ಚಿನ್ನದ ಪದಕ!
ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಂಪಿಯಾಡ್ ನಲ್ಲಿ ಭಾರತಕ್ಕೆ 5 ಚಿನ್ನದ ಪದಕ!
Published On :
ನವದೆಹಲಿ: ಅಂತಾರಾಷ್ಟ್ರೀಯ ಫಿಸಿಕ್ಸ್ ಒಲಂಪಿಯಾಡ್ 2018 ರಲ್ಲಿ ಭಾರತದ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದು, 5 ಚಿನ್ನದ ಪದಕ ಗೆದ್ದಿದ್ದಾರೆ. 
ಪೋರ್ಚುಗಲ್ ನ ಲಿಸ್ಬಾನ್ ನಲ್ಲಿ ನಡೆದ ಐಪಿಹೆಚ್ ಒ ದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತಂಡದ ಪ್ರತಿಯೊಬ್ಬ ಸದಸ್ಯರೂ ಅದ್ಭುತ ಪ್ರದರ್ಶನ ನೀಡಿದ್ದು, 5 ಜನಕ್ಕೂ ಚಿನ್ನದ ಪದಕ ದೊರೆತಿದೆ. 21 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ  ಭಾರತದ ಎಲ್ಲಾ ವಿದ್ಯಾರ್ಥಿಗಳೂ ಸಹ ಚಿನ್ನದ ಪದಕ ಗೆದ್ದಿದ್ದಾರೆ. 
86 ರಾಷ್ಟ್ರಗಳ ಪೈಕಿ ಐಪಿಹೆಚ್ ಒ ದಲ್ಲಿ ಗರಿಷ್ಠ ಚಿನ್ನದ ಪದಕ ಗಳಿಸಿರುವ ಮತ್ತೊಂದು ರಾಷ್ಟ್ರ ಚೀನಾ ಆಗಿದೆ. ಮುಂಬೈ ನ ಭಾಸ್ಕರ್ ಗುಪ್ತ, ಕೋಟಾದಿಂದ ಲೇ ಜೈನ್, ರಾಜ್ ಕೋಟ್ ನಿಂದ ನಿಶಾಂತ್ ಅಭಂಗಿ, ಜೈಪುರದಿಂದ ಪವಾನ್ ಗೋಯಲ್, ಕೋಲ್ಕತ್ತಾದಿಂದ ಸಿದ್ಧಾರ್ಥ್ ತಿವಾರಿ  ಅಂತಾರಾಷ್ಟ್ರೀಯ ಫಿಸಿಕ್ಸ್ ಒಲಂಪಿಯಾಡ್ 2018 ರಲ್ಲಿ ಭಾಗವಹಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.