ದೇಶ

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ವಿದೇಶಿ ಪ್ರಯಾಣ ಭಾಗ್ಯ?

ಕೇಂದ್ರ ಸರ್ಕಾರ ತನ್ನ ನೌಕರರನ್ನು ವಿದೇಶಕ್ಕೆ ಕಳುಹಿಸುವ ಚಿಂತನೆ ನಡೆಸುತ್ತಿದೆ...

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ವಿದೇಶಿ ಪ್ರಯಾಣ ಭಾಗ್ಯ?
ಏರ್ ಇಂಡಿಯಾ
Published On :
ನವದೆಹಲಿ: ಕೇಂದ್ರ ಸರ್ಕಾರ ತನ್ನ ನೌಕರರನ್ನು ವಿದೇಶಕ್ಕೆ ಕಳುಹಿಸುವ ಚಿಂತನೆ ನಡೆಸುತ್ತಿದೆ. 
ಕೇಂದ್ರ ಸರ್ಕಾರಿ ನೌಕರರು ವಿದೇಶಕ್ಕೆ ತೆರಳಲು ಅಧಿಕೃತ ಅವಕಾಶ ನೀಡುವಂತಹ ಲೀವ್ ಟ್ರಾವೆಲ್ ಕನ್ಸೆಷನ್(ಎಲ್ಟಿಸಿ) ಪ್ರಸ್ತಾವನೆಯು ಸದ್ಯ ಸಿಬ್ಬಂದಿ ಇಲಾಖೆಯ ಮುಂದಿದೆ. 
ಸಿಬ್ಬಂದಿ ಇಲಾಖೆ ಇದೀಗ ಗೃಹ, ಪ್ರವಾಸೋದ್ಯಮ, ನಾಗರಿಕ ವಾಯುಯಾನ ಸಚಿವಾಲಯದ ಪ್ರತಿಕ್ರಿಯೆಯನ್ನು ಕೇಳಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. 
ಏಷ್ಯಾದ ರಾಷ್ಟ್ರಗಳಾದ ತಜಕಿಸ್ತಾನ್, ಕಿರ್ಗಿಸ್ತಾನ್, ಉಝ್ಬೆಕಿಸ್ತಾನ್, ತುರ್ಕಿಮೆನಿಸ್ತಾನ್ ಮತ್ತು ಕಝಕಿಸ್ತಾನ್ ಗಳಿಗೆ ಮಾತ್ರ ತೆರಳಲು ಅವಕಾಶ ನೀಡಲು ವಿದೇಶಾಂಗ ಇಲಾಖೆಯು ಈಗಾಗಲೇ ಚರ್ಚೆ ನಡೆಸಿದೆ. 
ಸದ್ಯ 48.41 ಲಕ್ಷ ಕೇಂದ್ರ ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.