ದೇಶ

ಇಮ್ರಾನ್ ಖಾನ್ ದುರಹಂಕಾರಿ, ಆದ್ರೆ ಜನರನ್ನು ಯಾವತ್ತೂ ಕೀಳಾಗಿ ನೋಡಿಲ್ಲ: ಅನ್ಶುಮಾನ್ ಗಾಯಕವಾಡ್

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವ ಪಾಕ್ ಮಾಜಿ ಕ್ರಿಕೆಟಿಗ್ ಇಮ್ರಾನ್ ಖಾನ್ ಅವರು...

ಇಮ್ರಾನ್ ಖಾನ್ ದುರಹಂಕಾರಿ, ಆದ್ರೆ ಜನರನ್ನು ಯಾವತ್ತೂ ಕೀಳಾಗಿ ನೋಡಿಲ್ಲ: ಅನ್ಶುಮಾನ್ ಗಾಯಕವಾಡ್
ಇಮ್ರಾನ್ ಖಾನ್
Published On :
ನವದೆಹಲಿ: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವ ಪಾಕ್ ಮಾಜಿ ಕ್ರಿಕೆಟಿಗ್ ಇಮ್ರಾನ್ ಖಾನ್ ಅವರು ಒಬ್ಬ ದುರಹಂಕಾರಿ. ಆದರೆ  ಜನರನ್ನು ಯಾವತ್ತೂ ಕೀಳಾಗಿ ನೋಡಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಅನ್ಶುಮಾನ್ ಗಾಯಕವಾಡ್ ಅವರು ಹೇಳಿದ್ದಾರೆ.
ಗಾಯಕವಾಡ್ ಅವರು ತಮ್ಮ ಸಮಕಾಲೀನ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನೊಂದಿಗಿನ ದಿನಗಳನ್ನು ನೆನಪು ಮಾಡಿಕೊಂಡಿದ್ದು, ಅವರು ಒಬ್ಬ ಫಾಸ್ಟ್ ಬೌಲರ್ ಆಗಿದ್ದರು. ಅಲ್ಲದೆ ತಮ್ಮ ಕಿಲ್ಲರ್ ಲುಕ್ ನಿಂದ ಅಭಿಮಾನಿಗಳನ್ನು ಬೌಲ್ಡ್ ಮಾಡಿದ್ದರು ಎಂದಿದ್ದಾರೆ.
ಇಮ್ರಾನ್ ಖಾನ್ ಒಬ್ಬ ವಿಭಿನ್ನ ವ್ಯಕ್ತಿ. ಅವರ ಸ್ವಭಾವ, ವ್ಯಕ್ತಿತ್ವ ತುಂಬಾನೆ ಭಿನ್ನವಾಗಿತ್ತು. ಆಗಿನ ಪಾಕಿಸ್ತಾನ ತಂಡದಲ್ಲಿ ಇಮ್ರಾನ್ ಖಾನ್ ಭಿನ್ನ ಸ್ವಭಾವವನ್ನು ಯಾರೂ ಬೇಕಾದರೂ ಗುರುತಿಸಬಹುದಾಗಿತ್ತು ಎಂದು ಗಾಯಕವಾಡ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಅವರು ಒಬ್ಬ ಉನ್ನತ ಶಿಕ್ಷಣ ಪಡೆದ ವ್ಯಕ್ತಿಯಾಗಿದ್ದು, ಇತರರೊಂದಿಗೆ ಹೇಗೆ ಮಾತನಾಡಬೇಕು ಮತ್ತು ಹೇಗೆ ವರ್ತಿಸಬೇಕು ಎಂಬುದು ಚೆನ್ನಾಗಿ ಗೊತ್ತಿತ್ತು. ಸ್ವಲ್ಪ ದುರಹಂಕಾರಿ. ಆದರೆ ಅದನ್ನು ಎಲ್ಲಾ ಸಂದರ್ಭದಲ್ಲೂ ತೋರಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್(ಪಿಟಿಐ) ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಮ್ಮಿಶ್ರ ಸರ್ಕರ ರಚಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.