'ತಾಜ್ ಮಹಲ್'ಗೆ ಉಸ್ತುವಾರಿ ಯಾರು: ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ
ಯುನೆಸ್ಕೋ ಜಾಗತಿಕ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ತಾಜ್ ಮಹಲ್'ನ್ನು ರಕ್ಷಣೆ ಮಾಡುವುದರಲ್ಲಿ ವಿಫಲವಾದ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ವಿರುದ್ಧ ಸುಪ್ರೀಂಕೋರ್ಟ್ ಗುರುವಾರ ತೀವ್ರವಾಗಿ ಕಿಡಿಕಾರಿದೆ...
Published On :
ನವದೆಹಲಿ: ಯುನೆಸ್ಕೋ ಜಾಗತಿಕ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ತಾಜ್ ಮಹಲ್'ನ್ನು ರಕ್ಷಣೆ ಮಾಡುವುದರಲ್ಲಿ ವಿಫಲವಾದ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ವಿರುದ್ಧ ಸುಪ್ರೀಂಕೋರ್ಟ್ ಗುರುವಾರ ತೀವ್ರವಾಗಿ ಕಿಡಿಕಾರಿದೆ.
ತಾಜ್ ಮಹಲ್ ರಕ್ಷಣೆ ಕುರಿತು ಪರಿಸರ ಹೋರಾಟಗಾರ ಎಂಸಿ ಮೆಹ್ತಾ ಎಂಬುವವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ತಾಜ್ ಮಹಲ್ ಪರಿಸರ ರಕ್ಷಣೆ ಹಾಗೂ ಅಲ್ಲಿನ ಪ್ರದೇಶಗಳ ಮರು ಅಭಿವೃದ್ಧಿ ಕುರಿತ ಉಸ್ತುವಾರಿಗಳಾರು? ಉತ್ತರಪ್ರದೇಶ ಸರ್ಕಾರವನ್ನು ನ್ಯಾಯಮೂರ್ತಿ ಮದನ್ ಭೀಮರಾವ್ ಅವರಿದ್ದ ವಿಭಾಗೀಯ ಪೀಠ ಪ್ರಶ್ನಿಸಿದೆ.
ಮೊದಲು ಪರಿಸರ ಸಚಿವಾಲಯ ಅಫಿಡವಿಟ್ ಸಲ್ಲಿಸಿತ್ತು. ನಂತರ ಎಎಸ್ಐ, ಇದೀಗ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದೆ. ಸರ್ಕಾರದಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ವಿಶ್ವವಿಖ್ಯಾತ ತಾಣವಾಗಿರುವ ತಾಜ್ ಮಹಲ್ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. ಯಾರಾದರೂ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ತಾಜ್ ಮಹಲ್ ನಿರ್ವಹಣೆಗೆ ಒಂದು ಆಡಳಿತ ಬೇಕು. ತಾಜ್ ಮಹಲ್ ನಿರ್ವಹಣೆ ಕುರಿತಂತೆ ಅಧಿಕಾರಿಗಳು ತಮಗೇನು ಜವಾಬ್ದಾರಿಯೇ ಇಲ್ಲವೆಂಬಂತೆ ಕೈತೊಳೆದುಕೊಂಡು ಕುಳಿತಿದ್ದಾರೆ. ಎಎಸ್ಐ ಭಾಗಿತ್ವವಿಲ್ಲದೆಯೇ ವಿಷನ್ ಡಾಕ್ಯೂಮೆಂಟ್ ಸಿದ್ಧಪಡಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
1996ರಲ್ಲಿ ತಾಜ್ ಟ್ರೆಪೆಜಿಯಮ್ ವಲಯ (ಟಿಟಿಝಡ್)ವನ್ನು ರಚನೆ ಮಾಡಲಾಗಿತ್ತು. ಟಿಟಿಝಡ್ ರಚನೆಗೊಂಡಾಗಿನಿಂದಲೂ ಯಾವುದೇ ರೀತಿಯ ಕಾರ್ಯಗಳಾಗಿಲ್ಲ. ಎಡಗೈಯಲ್ಲಿ ಆಗಿದ್ದು, ಬಲಗೈಗೇ ತಿಳಿಯದೇ ಇರುವುದನ್ನು ನೋಡುತ್ತಿದ್ದರೆ, ನಿಜಕ್ಕೂ ಆಶ್ಚರ್ಯವಾಗುತ್ತಿದೆ ಎಂದು ತಿಳಿಸಿದೆ.
ಇದೇ ವೇಳೆ ತಾಜ್ ಮಹಲ್ ಸಂರಕ್ಷಣೆ ಕುರಿತು ಸರ್ಕಾರ ಸಲ್ಲಿಸಿದ್ದ ವಿಷನ್ ಡಾಕ್ಯುಮೆಂಟ್ (ದೂರದೃಷ್ಟಿ ಯೋಜನೆಗಳ ನೀಲನಕ್ಷೆ) ಕುರಿತಂತೆ ಪ್ರಶ್ನೆ ಮಾಡಿರುವ ನ್ಯಾಯಾಲಯ, ಕರಡನ್ನು ಯಾವ ಕಾರಣಕ್ಕೆ ಸಲ್ಲಿಸಿದ್ದಿರಿ? ಆ ಕರಡನ್ನು ನಾವು ಸರಿ ಮಾಡಬೇಕೇ? ಎಂದು ಪ್ರಶ್ನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

