ಗೋಮಾಂಸ ಸೇವನೆ ನಿಲ್ಲಿಸಿ; ಆರ್'ಎಸ್ಎಸ್ ನಾಯಕನ ಹೇಳಿಕೆಗೆ ಶಿಯಾ ವಕ್ಫ್ ಮಂಡಳಿ ಬೆಂಬಲ
ಸಾಮೂಹಿಕ ಹಲ್ಲೆಯಂತಹ ಘಟನೆಗಳು ನಿಲ್ಲಬೇಕಿದ್ದರೆ, ಜನರು ಗೋಮಾಂಸ ಸೇವನೆಯನ್ನು ನಿಲ್ಲಿಸಬೇಕೆಂದು ಹೇಳಿದ್ದ ಆರ್'ಎಸ್ಎಸ್ ನಾಯಕನ ಹೇಳಿಕೆಗೆ ಶಿಯಾ ವಕ್ಫ್ ಮಂಡಳಿ ಮಂಗಳವಾರ ಬೆಂಬಲ ನೀಡಿದೆ...

Published On :
ನವದೆಹಲಿ: ಸಾಮೂಹಿಕ ಹಲ್ಲೆಯಂತಹ ಘಟನೆಗಳು ನಿಲ್ಲಬೇಕಿದ್ದರೆ, ಜನರು ಗೋಮಾಂಸ ಸೇವನೆಯನ್ನು ನಿಲ್ಲಿಸಬೇಕೆಂದು ಹೇಳಿದ್ದ ಆರ್'ಎಸ್ಎಸ್ ನಾಯಕನ ಹೇಳಿಕೆಗೆ ಶಿಯಾ ವಕ್ಫ್ ಮಂಡಳಿ ಮಂಗಳವಾರ ಬೆಂಬಲ ನೀಡಿದೆ.
ಆರ್'ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸೀಮ್ ರಿಜ್ವಿಯವರು, ಗೋಮಾಂಸ ಸೇವನೆ ಇಸ್ಲಾಂನಲ್ಲಿ ಪಾಪದ ಕರ್ಮವಾಗಿದ್ದು, ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕೆಂದು ಹೇಳಿದ್ದಾರೆ.
ಇಂದ್ರೇಶ್ ಕುಮಾರ್ ಅವರ ಹೇಳಿಕೆಯಲ್ಲೂ ಒಂದು ಅಂಶವಿದೆ. ಧಾರ್ಮಿಕ ಭಾವನೆಗಳಿಗೆ ನೋವು ಮಾಡುವ ಕೆಲಸವನ್ನು ಯಾರೂ ಮಾಡಬಾರದು. ಗೋ ಹತ್ಯೆಗೆ ಕಾನೂನು ರೂಪಿಸಿದ್ದೇ ಆದರೆ, ಸಾಮೂಹಿಕ ಹಲ್ಲೆ ಪ್ರಕರಣಗಳು ನಿಲ್ಲುತ್ತವೆ. ಒಂದು ಸಮುದಾಯದ ಗೋವುಗಳಿಗೆ ತಾಯಿಯ ಸ್ಥಾನಮಾನವನ್ನು ನೀಡಿದ್ದು, ಅಂತಹ ಗೋವನ್ನು ಹತ್ಯೆ ಮಾಡಬಾರದು ಎಂದು ಹೇಳಿದ್ದಾರೆ.
ಮುಸ್ಲಿಮರು ಗೋವು ಹತ್ಯೆ ಮಾಡುವುದು ಮತ್ತು ಗೋಮಾಂಸ ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಗೋಮಾಂಸ ಸೇವನೆ ಇಸ್ಲಾಂ ಧರ್ಮದಲ್ಲಿ ಪಾಪವೆಂದು ಹೇಳಲಾಗುತ್ತದೆ. ಸಾಮೂಹಿಕ ಹಲ್ಲೆ ಪ್ರಕರಣಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಪ್ರತೀ ಪ್ರದೇಶದಲ್ಲಿಯೂ ಭದ್ರತೆ ನೀಡಲೂ ಸಾಧ್ಯವಿಲ್ಲ. ಗೋವುಗಳ ಹತ್ಯೆಗೆ ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತರಬೇಕಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
RSScowಗೋವುಆರ್\'ಎಸ್ಎಸ್Indresh Kumarಇಂದ್ರೇಶ್ ಕುಮಾರ್Shia Waqf Boardಶಿಯಾ ವಕ್ಫ್ ಮಂಡಳಿWaseem Rizvilynchingsಸಾಮೂಹಿಕ ಹಲ್ಲೆವಾಸೀಂ ರಿಜ್ವಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


