ದೇಶ

ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಟೆಲಿಕಾಂ ಕಂಪನಿಗಳಿಂದ 74 ಸಾವಿರ ಕೋಟಿ ರೂ. ಮೀಸಲು!

ಭಾರ್ತಿ ಏರ್ ಟೆಲ್ ಹಾಗೂ ರಿಲಾಯನ್ಸ್ ಜೊಯೋ ಸೇರಿದಂತೆ ಪ್ರಮುಖ ಟೆಲಿಕಾಂ ಆಪರೇಟರ್ ಗಳು ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಸುಮಾರು 74,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿವೆ

ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಟೆಲಿಕಾಂ ಕಂಪನಿಗಳಿಂದ 74 ಸಾವಿರ ಕೋಟಿ ರೂ. ಮೀಸಲು!
ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಟೆಲಿಕಾಂ ಕಂಪನಿಗಳಿಂದ 74 ಸಾವಿರ ಕೋಟಿ ರೂ. ಮೀಸಲು!
Published On :
ನವದೆಹಲಿ: ಭಾರ್ತಿ ಏರ್ ಟೆಲ್ ಹಾಗೂ ರಿಲಾಯನ್ಸ್ ಜೊಯೋ ಸೇರಿದಂತೆ ಪ್ರಮುಖ ಟೆಲಿಕಾಂ ಆಪರೇಟರ್ ಗಳು ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಸುಮಾರು 74,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿವೆ ಎಂದು ಟೆಲಿಕಾಂ ಇಲಾಖೆ ಕಾರ್ಯದರ್ಶಿ ಅರುಣಾ ಸುಂದರ್ ರಾಜನ್ ಹೇಳಿದ್ದಾರೆ. 
ಮೊಬೈಲ್ ಟವರ್ ಗಳನ್ನು ಸ್ಥಾಪಿಸುವುದಕ್ಕೆ ಜಾಗದ ಕೊರತೆ ಸೇರಿದಂತೆ ಟೆಲಿಕಾಂ ಸಂಸ್ಥೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ, ಕಾಲ್ ಡ್ರಾಪ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭಾರ್ತಿ ಏರ್ ಟೆಲ್ ಸಂಸ್ಥೆಯವರು ಮೂಲಸೌಕರ್ಯಕ್ಕಾಗಿ 16  ಸಾವಿರ ಕೋಟಿ ರೂಪಾಯಿ ಹಾಗೂ 24,000 ಕೋಟಿ ರೂಪಾಯಿಯನ್ನು ಇನ್ನಿತರ ಉದ್ದೇಶಕ್ಕಾಗಿ ಹೂಡಿಕೆ ಮಾಡುವುದಾಗಿ ಹೇಳಿದೆ. 
ರಿಲಾಯನ್ಸ್ ಜಿಯೋ ಮುಂಬರುವ ಹಣಕಾಸು ವರ್ಷದಲ್ಲಿ 50,000 ರೂಪಾಯಿಗಳನ್ನು 1 ಲಕ್ಷ ಟವರ್ ಗಳನ್ನು ಸ್ಥಾಪಿಸುವುದಕ್ಕಾಗಿಯೇ ಖರ್ಚು ಮಾಡಲು ತೀರ್ಮಾನಿಸಿದ್ದು, ಐಡಿಯಾ ವೋಡೊಫೋನ್ ಸಹ ಕಾಲ್ ಡ್ರಾಪ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ  ಎಂದು ಸುಂದರ್ ರಾಜನ್ ಟೆಲಿಕಾಂ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.