'ಹೊಸ ಯುಗದ ಅಧಿಪತಿಗಳು': ಭಾರತ-ಇಸ್ರೇಲ್ ಸೌಹಾರ್ಧ ಸಂಬಂಧ ಕುರಿತು ನೇತಾನ್ಯಹು ಹೇಳಿಕೆ
ಭಾರತ ಮತ್ತು ಇಸ್ರೇಲ್ ದೇಶಗಳ ಹೊಸ ಸ್ನೇಹ ಯುಗದ ಅಧಿಪತಿಗಳು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಬಣ್ಣಿಸಿದ್ದಾರೆ.

Published On :
ನವದೆಹಲಿ: ಭಾರತ ಮತ್ತು ಇಸ್ರೇಲ್ ದೇಶಗಳ ಹೊಸ ಸ್ನೇಹ ಯುಗದ ಅಧಿಪತಿಗಳು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಬಣ್ಣಿಸಿದ್ದಾರೆ.
ಇಂದು ದೆಹಲಿಯ ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ಇಸ್ರೇಲ್ ಪ್ರಧಾನಿ ನೆತಾನ್ಯಹು ಅವರಿಗೆ ಭಾರತೀಯ ಸೇನೆಯಿಂದ ಗಾರ್ಡ್ ಆಫ್ ಹಾನರ್ ಸಲ್ಲಿಕೆ ಮಾಡಲಾಯಿತು. ಇದಕ್ಕೂ ಮೊದಲು ರಾಜ್ ಘಾಟ್ ಗೆ ತೆರಳಿದ್ದ ನೆತಾನ್ಯಹು ದಂಪತಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ತೆರಳಿ ಗೌರವ ಸಲ್ಲಿಕೆ ಮಾಡಿದರು. ಬಳಿಕ ರಾಷ್ಟ್ರಪತಿ ಭವನದತ್ತ ಆಗಮಿಸಿದ ಇಸ್ರೇಲ್ ಪ್ರಧಾನಿಗೆ ಭಾರತ ಸರ್ಕಾರದ ವತಿಯಿಂದ ಸೈನಿಕರು ಗೌರವ ವಂದನೆ ಸಲ್ಲಿಕೆ ಮಾಡಿದರು. ಈ ವೇಳೆ ನೇತಾನ್ಯಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಭಾರತ-ಇಸ್ರೇಲ್ 'ಹೊಸ ಸ್ನೇಗ ಯುಗದ ಅಧಿಪತಿಗಳು'
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೇಲ್ ಪ್ರಧಾನಿ ಭಾರತ ಮತ್ತು ಇಸ್ರೇಲ್ ಸ್ನೇಹ ಸಂಬಂಧವನ್ನು ಕೊಂಡಾಡಿದರು. ಭಾರತ ಮತ್ತು ಇಸ್ರೇಲ್ ದೇಶಗಳು ಹೊಸ ಸ್ನೇಹ ಯುಗದ ಅಧಿಪತಿಗಳು ಎಂದು ಬಣ್ಣಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಐತಿಹಾಸಿಕ ಹೊಸ ಸ್ನೇಹಯುಗಕ್ಕೆ ನಾಂದಿ ಹಾಡಿತು.. ನನ್ನ ಭಾರತ ಭೇಟಿ ಅದರ ಮುಂದುವರಿದ ಭಾಗವಷ್ಟೇ...ಭವಿಷ್ಯದಲ್ಲಿ ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಇಸ್ರೇಲ್ ಪ್ರಜೆಗಳಲ್ಲಿ ಭಾರತದ ಬಗ್ಗೆ ಅತೀವ ಗೌರವವಿದ್ದು, ನಮ್ಮ ಸ್ನೇಹ ಉಭಯ ದೇಶಗಳ ಸಮೃದ್ಧಿ, ಶಾಂತಿ ಮತ್ತು ಪ್ರಗತಿಯತ್ತ ಸಾಗಲಿದೆ ಎಂದು ನೇತಾನ್ಯಹು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿisraelಇಸ್ರೇಲ್New DelhiindiaಭಾರತPM Modiಪ್ರಧಾನಿ ಮೋದಿRashtrapati BhawanBenjamin Netanyahuಬೆಂಜಮಿನ್ ನೆತಾನ್ಯಹುIsrael PM In Indiaಭಾರತದಲ್ಲಿ ಇಸ್ರೇಲ್ ಪ್ರಧಾನಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


