ದೇಶ

ಪತಿಗೆ ವಿಚ್ಛೇದನಕ್ಕೆ ನಕಾರ: ಮೂರನೇ ಸವತಿಗೆ ಬೆಂಕಿ ಹಚ್ಚಿದ ನಾಲ್ಕನೇ ಪತ್ನಿ!

ಪತಿಗೆ ವಿಚ್ಛೇದನ ನೀಡಲು ನಿರಾಕರಿಸಿದ ಮೂರನೇ ಪತ್ನಿಗೆ ನಾಲ್ಕನೇ ಪತ್ನಿ ಬೆಂಕಿ ಹಚ್ಚಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ...

ಪತಿಗೆ ವಿಚ್ಛೇದನಕ್ಕೆ ನಕಾರ: ಮೂರನೇ ಸವತಿಗೆ ಬೆಂಕಿ ಹಚ್ಚಿದ ನಾಲ್ಕನೇ ಪತ್ನಿ!
ಸಂಗ್ರಹ ಚಿತ್ರ
Published On :
ಭೋಪಾಲ್: ಪತಿಗೆ ವಿಚ್ಛೇದನ ನೀಡಲು ನಿರಾಕರಿಸಿದ ಮೂರನೇ ಪತ್ನಿಗೆ ನಾಲ್ಕನೇ ಪತ್ನಿ ಬೆಂಕಿ ಹಚ್ಚಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ. 
ನಾನು ನನ್ನ ಪತಿಯೊಂದಿಗೆ ಜೀವಿಸಬೇಕು ಹೀಗಾಗಿ ನೀನು ನನ್ನ ಪತಿಗೆ ವಿಚ್ಛೇದನ ನೀಡುವಂತೆ ಮೂರನೇ ಪತ್ನಿಗೆ ನಾಲ್ಕನೇ ಪತ್ನಿ ಪೀಡಿಸುತ್ತಿದ್ದಳು. ಇದಕ್ಕೆ ಮೂರನೇ ಪತ್ನಿ ನಿರಾಕರಿಸಿದ್ದಕ್ಕೆ ತಾಯಿಯೊಂದಿಗೆ ಸೇರಿಕೊಂಡ ನಾಲ್ಕನೇ ಪತ್ನಿ ಆಕೆಗೆ ಬೆಂಕಿದ್ದಾಳೆ. ಈ ಸಂಬಂಧ ನಾಲ್ಕನೇ ಪತ್ನಿ ಆಯೇಷ ಮತ್ತು ಆಕೆಯ ತಾಯಿ ವಸೀಂ ವಿರುದ್ಧ ನಿಶಾತ್ ಪುರ ಪೊಲೀಸರು ಕೊಲೆ ಯತ್ನ ದೂರು ದಾಖಲಿಸಿದ್ದಾರೆ. 
ಹೌಸಿಂಗ್ ಸೊಸೈಟಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸಲೀಂ ಎಂಬುವರು ಕೆಲಸ ಮಾಡುತ್ತಿದ್ದು ಆತ ಮೂರನೇ ಪತ್ನಿ ಶಬನಮ್ ಇದ್ದರು ನಾಲ್ಕನೇ ಮದುವೆ ಮಾಡಿಕೊಂಡಿದ್ದ. ಆರೋಪಿ ಆಯೇಷ ಶಬನಮ್ ಗೆ ಸಲೀಂಗೆ ವಿಚ್ಧೇದನ ನೀಡುವಂತೆ ಪೀಡಿಸುತ್ತಿದ್ದಳು. ಇದಕ್ಕೆ ಶಬನಮ್ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡು ಜನವರಿ 4ರಂದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. 
ಶಬಮನ್ ಹೇಳಿಕೆ ಹಿನ್ನೆಲೆಯಲ್ಲಿ ಆಯೇಷ ಮತ್ತು ಆಕೆಯ ತಾಯಿ ವಸೀಮ ವಿರುದ್ಧ ಪ್ರಕರಣ ದಾಖಲಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಶಬಮನ್ ಶೇಖಕ 50ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.