ದೇಶ

ಜಗತ್ತಿನಲ್ಲಿ ಭಾರತ ಅತ್ಯಂತ ಮುಕ್ತ ಆರ್ಥಿಕ ದೇಶಗಳಲ್ಲಿ ಒಂದು: ಪ್ರಧಾನಿ ನರೇಂದ್ರ ಮೋದಿ

ವಿಶ್ವದಲ್ಲಿ ಭಾರತ ಪ್ರಮುಖ ಮುಕ್ತ ಆರ್ಥಿಕ ದೇಶವಾಗಿದ್ದು ಬೇರೆ ದೇಶಗಳ ಜೊತೆ ವ್ಯಾಪಾರ ನಡೆಸಲು ....

ಜಗತ್ತಿನಲ್ಲಿ ಭಾರತ ಅತ್ಯಂತ ಮುಕ್ತ ಆರ್ಥಿಕ ದೇಶಗಳಲ್ಲಿ ಒಂದು: ಪ್ರಧಾನಿ ನರೇಂದ್ರ ಮೋದಿ
ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ವಿಶ್ವದಲ್ಲಿ ಭಾರತ ಪ್ರಮುಖ ಮುಕ್ತ ಆರ್ಥಿಕ ದೇಶವಾಗಿದ್ದು ಬೇರೆ ದೇಶಗಳ ಜೊತೆ ವ್ಯಾಪಾರ ನಡೆಸಲು ಸದಾ ಸಿದ್ದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ದೆಹಲಿಯಲ್ಲಿ ಭಾರತ-ಕೊರಿಯಾ ಉದ್ಯಮ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿ, ಸ್ಥಿರ ಉದ್ಯಮ ಪರಿಸರ ಸೃಷ್ಟಿಸಲು ತಮ್ಮ ಸರ್ಕಾರ ಕೆಲಸ ಮಾಡಿದ್ದು, ನಿರ್ಧಾರ ತೆಗೆದುಕೊಳ್ಳುವಲ್ಲಿ ನಿರಂಕುಶತೆಯನ್ನು ತೆಗೆದುಹಾಕಿದೆ ಎಂದು ಹೇಳಿದರು.

ಪ್ರತಿದಿನದ ವಹಿವಾಟಿನಲ್ಲಿ ಉತ್ತಮ ಅಂಶವನ್ನು ಕಾಣುತ್ತೇವೆ. ಸಂಶಯವೆಂಬ ಸ್ವಭಾವವನ್ನು ಅಗೆಯದೆ ನಾವು ವಿಶ್ವಾಸ, ನಂಬಿಕೆಯನ್ನು ವಿಸ್ತರಿಸುತ್ತಿದ್ದೇವೆ. ಇದು ಸರ್ಕಾರದ ಮನೋವೃತ್ತಿಯನ್ನು ಸಂಪೂರ್ಣವಾಗಿ ಬದಲಾಗಿರುವುದನ್ನು ಪ್ರತಿನಿಧಿಸುತ್ತದೆ ಎಂದರು.

ಇಂಧನ ಖರೀದಿಯಲ್ಲಿ ಭಾರತ ಈಗಾಗಲೇ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ಯಲ್ಲಿ ಭಾರತ ಸದ್ಯದಲ್ಲಿಯೇ ವಿಶ್ವದಲ್ಲಿ 5ನೇ ಅತಿದೊಡ್ಡ ದೇಶವಾಗಲಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕ ದೇಶಗಳ ಪೈಕಿಯಲ್ಲಿ ಭಾರತ ಕೂಡ ಒಂದಾಗಿದೆ ಎಂದರು.

ಸ್ಟಾರ್ಟ್ ಅಪ್ ಉದ್ಯಮಗಳ ಆರಂಭಕ್ಕೆ ಭಾರತದಲ್ಲಿ ಪೂರಕ ವಾತಾವರಣವಿದೆ. ಕೈಗಾರಿಕಾ ಪರವಾನಗಿ ಅವಧಿಯನ್ನು ಮೂರು ವರ್ಷಗಳಿಂದ 15 ವರ್ಷಗಳಿಗೆ ಹೆಚ್ಚಿಸಲಾಗಿದೆ. ಅಕ್ರಮ ಉದ್ಯಮಗಳ ನಿಯಂತ್ರಣ ತೆಗೆಯುವ ಮತ್ತು ಪರವಾನಗಿ ರದ್ದುಪಡಿಸುವ ಅಭಿಯಾನವನ್ನು ಸರ್ಕಾರ ಕೈಗೊಂಡಿದೆ ಎಂದರು.

ಇಂದು ಜಗತ್ತಿನಾದ್ಯಂತ ನೋಡಿದರೆ ಆರ್ಥಿಕತೆಯಲ್ಲಿ ಮೂರು ಮುಖ್ಯ ಅಂಶಗಳನ್ನು ಹೊಂದಿರುವ ದೇಶಗಳು ಕಡಿಮೆ. ಅವುಗಳೆಂದರೆ ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ ಮತ್ತು ಬೇಡಿಕೆ.ಭಾರತದಲ್ಲಿ ಇವು ಮೂರೂ ಅಂಶಗಳನ್ನು ಕಾಣಬಹುದು. ಭಾರತ ಇಂದು ಬೇರೆ ದೇಶಗಳ ಜೊತೆ ವ್ಯಾಪಾರ ಮಾಡಲು ಸಿದ್ಧವಾಗಿದ್ದು ಅವರ ಹೂಡಿಕೆಗಳನ್ನು ರಕ್ಷಿಸಿ ಅಭಿವೃದ್ಧಿಪಡಿಸಲು ಅಗತ್ಯವಿರುವುದನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರ ಸರ್ಕಾರ ಹಳೆ ನಾಗರಿಕತೆಯಿಂದ ಆಧುನಿಕ ಸಮಾಜಕ್ಕೆ, ಅನೌಪಚಾರಿಕ ಆರ್ಥಿಕತೆಯಿಂದ ಔಪಚಾರಿಕ ಆರ್ಥಿಕತೆಗೆ ಭಾರತವನ್ನು ರೂಪಾಂತರಗೊಳಿಸಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಭಾರತ ಮತ್ತು ಕೊರಿಯಾ ದೇಶಗಳ ನಡುವಣ ಸಂಬಂಧ ಶತಮಾನಗಳಷ್ಟು ಹಳೆಯದ್ದು. ಬೌದ್ಧ ಸಂಪ್ರದಾಯಗಳಿಗೂ ನಾವು ಬದ್ಧರಾಗಿದ್ದೇವೆ. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಠಾಗೋರ್ 1929ರಲ್ಲಿ ಲ್ಯಾಂಪ್ ಆಫ್ ದ ಈಸ್ಟ್ ಎಂಬ ಕವನವನ್ನು ಬರೆದಿದ್ದರು. ಅದರಲ್ಲಿ ಕೊರಿಯಾ ದೇಶದ ಹಿಂದಿನ ಮತ್ತು ಮುಂದಿನ ಸೊಬಗನ್ನು ವರ್ಣಿಸಿದ್ದರು. ರಾಣಿಯಿಂದ ಕವನದವರೆಗೆ ಬುದ್ಧನಿಂದ ಬಾಲಿವುಡ್ ವರೆಗೆ ಭಾರತ ಮತ್ತು ಕೊರಿಯಾ ದೇಶಗಳ ನಡುವೆ ಹಲವು ಸಾಮ್ಯತೆಗಳಿವೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.