ದೆಹಲಿ: ಚುಡಾಯಿಸಿದ ಕಾಮುಕರನ್ನು ಪೊಲೀಸ್ ಠಾಣೆಗೆ ಎಳೆದುತಂದ ದಿಟ್ಟ ಮಹಿಳೆ!
ತನ್ನನ್ನು ಚುಡಾಯಿಸಿದ ಇಬ್ಬರು ಕಾಮುಕರನ್ನು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಎಳೆದು ಕರೆತಂದು ದೂರು ದಾಖಲಿಸಿರುವ ಘಟನೆ ದೆಹಲಿಯ ಘಫರ್ ಮಾರುಕಟ್ಟೆ ...

Published On :
ದೆಹಲಿ: ತನ್ನನ್ನು ಚುಡಾಯಿಸಿದ ಇಬ್ಬರು ಕಾಮುಕರನ್ನು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಎಳೆದು ಕರೆತಂದು ದೂರು ದಾಖಲಿಸಿರುವ ಘಟನೆ ದೆಹಲಿಯ ಘಫರ್ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ.
ಫೆಬ್ರವರಿ 25ರಂದು ಮಹಿಳೆ ಆಟೋ ರಿಕ್ಷಾದಲ್ಲಿ ಘಫರ್ ಮಾರ್ಕೆಟ್ ಪ್ರದೇಶದಲ್ಲಿ ಸಂಚರಿಸುತ್ತಿದ್ದರು, ಈ ವೇಳೆ ಇಬ್ಬರು ಆರೋಪಿಗಳು ಆಕೆಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳೆ, ಇಬ್ಬರಲ್ಲಿ ಒಬ್ಬ ಆರೋಪಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಎಳೆದು ತಂದಿದ್ದಾಳೆ, ಮತ್ತು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿಗಳನ್ನು ಅಭಿಷೇಕ್ ಮತ್ತು ಮನೀಶ್ ಎಂದು ಗುರುತಿಸಲಾಗಿದೆ, ಇಬ್ಬರು ಚಾರ್ಕಿ ದದ್ರಿ ಪ್ರದೇಶದ ನಿವಾಸಿಗಳಾಗಿದ್ದಾರೆ, ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


