ದೇಶ

ಮಾರ್ಚ್ 23 ರಂದು ರಾಜ್ಯಸಭಾ ಚುನಾವಣೆ: ರಾಜ್ಯದಲ್ಲೂ 4 ಸ್ಥಾನಗಳಿಗೆ ಸ್ಪರ್ಧೆ

ದೇಶದ 59 ಸ್ಥಾನಗಳಿಗೆ ಮಾರ್ಡ್ 23 ರಂದು ಚುನಾವಣೆ ನಡೆಯಲಿದ್ದು, ರಾಜ್ಯದ 4 ಸ್ಥಾನಗಳಿಗೂ ಅಂದೇ ಚುನಾವಣೆ ನಡೆಯಲಿದೆ....

ಮಾರ್ಚ್ 23 ರಂದು ರಾಜ್ಯಸಭಾ ಚುನಾವಣೆ: ರಾಜ್ಯದಲ್ಲೂ 4 ಸ್ಥಾನಗಳಿಗೆ ಸ್ಪರ್ಧೆ
ಚುನಾವಣಾ ಆಯೋಗ
Published On :
ನವದೆಹಲಿ:  ದೇಶದ 59 ಸ್ಥಾನಗಳಿಗೆ  ಮಾರ್ಡ್ 23 ರಂದು ಚುನಾವಣೆ ನಡೆಯಲಿದ್ದು, ರಾಜ್ಯದ 4 ಸ್ಥಾನಗಳಿಗೂ ಅಂದೇ ಚುನಾವಣೆ ನಡೆಯಲಿದೆ.
ಮಾರ್ಚ್‌ 23ರಂದು ರಾಜ್ಯದ 4 ಸ್ಥಾನಗಳಿಗೆ ದಿನಾಂಕ ನಿಗದಿ ಪಡಿಸಿ ಶುಕ್ರವಾರ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ನಿವೃತ್ತಿಯಾಗಲಿರುವವರ 58 ಸ್ಥಾನ ತುಂಬಲು ಈ ಚುನಾವಣೆ ನಡೆಯಲಿದೆ. ಅಲ್ಲದೆ ಕೇರಳದ ಒಂದು ಸ್ಥಾನಕ್ಕೆ ಉಪಚುನಾವಣೆಯೂ ನಡೆಯಲಿದೆ.
ಮಾ. 23ರಂದು 58 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಸಚಿವರಾದ ಅರುಣ್‌ ಜೇಟ್ಲಿ, ರವಿ ಶಂಕರ್‌ ಪ್ರಸಾದ್‌, ಪ್ರಕಾಶ್‌ ಜಾವ್ಡೇಕರ್‌, ಜೆ.ಪಿ. ನಡ್ಡಾ, ತಾವರ್‌ಚಂದ್‌ ಗೆಹ್ಲೋಟ್‌ ಅವರ ಅವಧಿ ಎಪ್ರಿಲ್.2ರಂದೇ ಅಂತಿಮಗೊಳ್ಳಲಿದೆ.
ಇನ್ನು ಕಾಂಗ್ರೆ ಸ್‌ನಿಂದ ಆಂಧ್ರದ ಚಿರಂಜೀವಿ, ರೇಣುಕಾ ಚೌಧರಿ, ರಾಜೀವ್‌ ಶುಕ್ಲಾ, ಉತ್ತರ ಪ್ರದೇಶದಲ್ಲಿ ಎಸ್ಪಿಯ ನರೇಶ್‌ ಅಗರ್ವಾಲ್‌, ಜಯಾ ಬಚ್ಚನ್‌, ಬಿಎಸ್‌ಪಿಯ ಮಾಯಾವತಿ ಅವಧಿಯೂ ಅಂತ್ಯಗೊಳ್ಳಲಿದೆ. ನಾಮ ನಿರ್ದೇಶಿತ ಸದಸ್ಯರಾದ ಕ್ರಿಕೆಟಿಗ ತೆಂಡೂಲ್ಕರ್‌, ನಟಿ ರೇಖಾ, ಆರ್ಥಿಕ ತಜ್ಞ ಅನು ಆಗ ಅವರ ಅವಧಿಯೂ ಎ. 26ರಂದು ಅಂತ್ಯವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.