ದೇಶ

ಸಾಲ ಮರು ಪಾವತಿಯ ಪಕ್ಕಾ ಯೋಜನೆಯೊಂದಿಗೆ ಬನ್ನಿ: ನೀರವ್ ಮೋದಿಗೆ ಪಿಎನ್ ಬಿ

ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸಬಹುದಾದ ಪಕ್ಕಾ ಯೋಜನೆಯೊಂದಿಗೆ ಬನ್ನಿ ಎಂದು ವಜ್ರದ ವ್ಯಾಪಾರಿ,...

ಸಾಲ ಮರು ಪಾವತಿಯ ಪಕ್ಕಾ ಯೋಜನೆಯೊಂದಿಗೆ ಬನ್ನಿ: ನೀರವ್ ಮೋದಿಗೆ ಪಿಎನ್ ಬಿ
ನೀರವ್ ಮೋದಿ
Published On :
ನವದೆಹಲಿ: ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸಬಹುದಾದ ಪಕ್ಕಾ ಯೋಜನೆಯೊಂದಿಗೆ ಬನ್ನಿ ಎಂದು ವಜ್ರದ ವ್ಯಾಪಾರಿ, ಬಹುಕೋಟಿ ವಂಚಕ ನೀರವ್ ಮೋದಿಗೆ ಹಗರಣ ಪೀಡಿತ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಗುರುವಾರ ಸೂಚಿಸಿದೆ.
ಕೆಲವು ಬ್ಯಾಂಕ್ ಅಧಿಕಾರಿಗಳ ಸಹಕಾರದಿಂದ ಬ್ಯಾಂಕ್ ಗೆ 11,400 ಕೋಟಿ ರುಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಮೇಲ್ ಗೆ ಪ್ರತಿಕ್ರಿಯಿಸಿರುವ ಪಿಎನ್ ಬಿ, ಕೂಡಲೇ ಸಾಲ ಮರು ಪಾವತಿಗೆ ಸಂಬಂಧಿಸಿದಂತೆ ಮಾರ್ಗೋಪಾಯಗಳ  ಬಗ್ಗೆ ಮಾಹಿತಿ ನೀಡುವಂತೆ  ಸೂಚಿಸಿದೆ.
'ನೀವು ಕಾನೂನು ಬಾಹಿರವಾಗಿ ಮತ್ತು ಕೆಲವು ಬ್ಯಾಂಕ್ ಅಧಿಕಾರಿಗಳಿಂದ ಅಕ್ರಮವಾಗಿ ಒಪ್ಪಂದ ಪತ್ರ ಪಡೆದಿದ್ದೀರಿ. ಯಾವ ಹಂತದಲ್ಲಿ ಅಂತಹ ಸಾಲ ಸೌಲಭ್ಯಗಳನ್ನು ನಮ್ಮ ಬ್ಯಾಂಕಿನಿಂದ ನಿಮ್ಮ ಮೂರು ಪಾಲುದಾರ ಸಂಸ್ಥೆಗಳಿಗೆ ವಿಸ್ತರಿಸಲಾಯಿತು ಎಂಬುದಕ್ಕೆ ಉತ್ತರ ನೀಡಿ' ಎಂದು ಪಿಎನ್ ಬಿ ಜನರಲ್ ಮ್ಯಾನೇಜರ್(ಅಂತರಾಷ್ಟ್ರೀಯ ಬ್ಯಾಂಕಿಂಗ್ ವಿಭಾಗ) ಅಶ್ವಿನಿ ವಾತ್ಸಾ ಅವರು ನೀರಮ್ ಮೋದಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೀರವ್ ಮೋದಿಯ ಅಕ್ರಮ ಬಯಲಿಗೆ ಬರುತ್ತಿದ್ದಂತೆ ಬ್ಯಾಂಕ್ ಅಧಿಕಾರಿಗಳು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಗಮನಕ್ಕೆ ತಂದಿದೆ ಎಂದು ಮೂಲಗಳು ತಿಳಿಸಿವೆ.
ನೀವು ಪಡೆದುಕೊಂಡ ಒಟ್ಟು ಸಾಲ ಮತ್ತು ಬಡ್ಡಿಯನ್ನು ನಿಗದಿತ ಸಮಯದಲ್ಲಿ ಮರು ಪಾವತಿಸಲು ಬದ್ಧವಾಗಿದ್ದರೆ ಈ ಕೂಡಲೇ ಜಾರಿಗೊಳಿಸಬಹುದಾದ ಯೋಜನೆಯೊಂದಿಗೆ ವಾಪಸ್ ಬನ್ನಿ ಎಂದು ಬ್ಯಾಂಕ್ ಸೂಚಿಸಿದೆ.
ವಂಚನೆ ಪ್ರಕರಣ ಸಂಬಂಧ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿರುದ್ಧವೇ ಆರೋಪ ಮಾಡಿರುವ ನೀರವ್ ಮೋದಿ, ನಿಮ್ಮ ಬ್ಯಾಂಕ್ ಕೈಗೊಂಡಿರುವ ಕ್ರಮಗಳಿಂದ ನನ್ನ ಉದ್ಯಮದ ಬ್ರ್ಯಾಂಡ್ ಗೆ ಹೊಡೆತ ಬಿದ್ದಿದೆ, ನೀವು ಕೈಗೊಂಡಿರುವ ಕ್ರಮಗಳು ಸಾಲ ವಾಪಸ್ ಪಡೆದುಕೊಳ್ಳಲು ನಿಮಗೆ ಇದ್ದ ಆಯ್ಕೆಗಳೆಲ್ಲವೂ ಬಂದ್ ಆಗಿವೆ ಎಂದು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.