Punjab national bank

PNB ಬ್ಯಾಂಕ್‌ನಲ್ಲಿ ಬಯಲಾಯ್ತು ಮಹಾ ಗೋಲ್‌ಮಾಲ್! ಕಾಣೆಯಾಗಿದ್ದ 4 ಲಕ್ಷ ರೂ ಹುಡುಕಲು ಹೊರಟ ಬ್ಯಾಂಕ್‌ಗೆ ಸಿಕ್ಕಿದ್ದು ಬರೋಬ್ಬರಿ ₹7.40 ಕೋಟಿ ನಕಲಿ ನೋಟು
ಉತ್ತರ ಪ್ರದೇಶದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯ ಕರೆನ್ಸಿ ಚೆಸ್ಟ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿದೆ. ಆರ್‌ಬಿಐ 4.36 ಲಕ್ಷ ರೂ.ಗಳನ್ನು ಹುಡುಕುತ್ತಿದ್ದಾಗ, PNB ಶಾಖೆಯಲ್ಲಿ 7.40 ಕೋಟಿ ನಕಲಿ ಕರೆನ್ಸಿ ಪತ್ತೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಬಂಪರ್ ನೇಮಕಾತಿ! 545 ಆಫೀಸರ್ ಹುದ್ದೆಗಳಿಗೆ ಪದವಿಧರರಿಂದ ಅರ್ಜಿ ಆಹ್ವಾನಿಸಿದ PNB; ಸಂಬಳ 85 ಸಾವಿರ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಪದವಿಧರರಿಗೆ ದೇಶದ 2ನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ. ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್-I ಅಡಿಯಲ್ಲಿ ಒಟ್ಟು 545 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಮಹಿಳಾ ವಿಶ್ವಕಪ್ ಗೆದ್ದ ಬಳಿಕ ಹರ್ಮನ್ ಪ್ರೀತ್ ಕೌರ್ ಗೆ ಮತ್ತೊಂದು 'ಜಾಕ್ ಪಾಟ್'! Video
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಕೌರ್ ತನ್ನ ಮೊದಲ ಮಹಿಳಾ ಬ್ರಾಂಡ್ ಅಂಬಾಸಿಡರ್ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಮಣಿಪುರ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ 18 ಕೋಟಿ ರೂ. ಲೂಟಿ ಮಾಡಿದ ಶಸ್ತ್ರಸಜ್ಜಿತ ಡಕಾಯಿತರು!
ಮಣಿಪುರದ ಉಖ್ರುಲ್ ಜಿಲ್ಲೆಯ ಸಾರ್ವಜನಿಕ ವಲಯದ ಬ್ಯಾಂಕ್‌ನ ಶಾಖೆಯೊಂದರಿಂದ ಮುಖಕ್ಕೆ ಮಾಸ್ಕ್ ಧರಿಸಿದ ಶಸ್ತ್ರಸಜ್ಜಿತ ಡಕಾಯಿತರು 18.80 ಕೋಟಿ ರೂ. ಹಣವನ್ನು ದೋಚಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಕುರಿತು ಉಖ್ರುಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 42 ಕೋಟಿ ರೂಪಾಯಿ ವಂಚನೆ ಆರೋಪ: ಮಾಜಿ ಸಂಸದೆ ಗೀತಾಗೆ ಐದು ವರ್ಷ ಜೈಲು ಶಿಕ್ಷೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಕೊತಪಲ್ಲಿ ಗೀತಾ ಅವರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿ ಸಿಬಿಐ ಕೋರ್ಟ್ ಆದೇಶಿಸಿದೆ

ನೀರವ್ ಮೋದಿ ಹಸ್ತಾಂತರ ಮನವಿ ಯುಕೆ ಹೈಕೋರ್ಟ್ ನಲ್ಲಿ ತಿರಸ್ಕೃತ; ಮೌಖಿಕ ವಿಚಾರಣೆಗೆ ಮೇಲ್ಮನವಿ ಸಲ್ಲಿಸಲು 5 ದಿನ ಕಾಲಾವಕಾಶ
ಭಾರತಕ್ಕೆ ಬೇಕಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರನ್ನು ನಮ್ಮ ದೇಶಕ್ಕೆ ಹಸ್ತಾಂತರಿಸಲು ಏಪ್ರಿಲ್ ನಲ್ಲಿ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಇಲ್ಲಿನ ಹೈಕೋರ್ಟ್ ನಲ್ಲಿ ಹಸ್ತಾಂತರದ ಮೇಲ್ಮನವಿಯ ಮೊದಲ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಆಕ್ಸಿಜನ್ ಸಮೇತ ಕಚೇರಿಗೆ ಬಂದ ಮ್ಯಾನೇಜರ್: ಹಿರಿಯ ಅಧಿಕಾರಿಗಳನ್ನು ದೂಷಿಸಲು ನಾಟಕ ಎಂದ ಪಿಎನ್‌ಬಿ
ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ತಮ್ಮ ಹಿರಿಯ ಅಧಿಕಾರಿಯೊಬ್ಬರು ರಜೆ ನಿರಾಕರಿಸಿದ್ದರಿಂದ ಆಕ್ಸಿಜನ್ ಬೆಂಬಲದೊಂದಿಗೆ ಕೆಲಸಕ್ಕೆ ಬರಬೇಕಾಯಿತು ಎಂದು ಬ್ಯಾಂಕ್ ನೌಕರ ಅರವಿಂದ್ ಕುಮಾರ್ ಮಾಡಿರುವ ಆರೋಪಗಳನ್ನು ಪಿಎನ್‌ಬಿ ನಿರಾಕರಿಸಿದ್ದಾರೆ.

ಡಿಎಫ್ಎಚ್ಎಲ್ ನಿಂದ 3,688 ಕೋಟಿ ರೂ. ವಂಚನೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಆರ್ ಬಿಐಗೆ ವರದಿ ಸಲ್ಲಿಕೆ
ದೇವನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್(ಡಿಎಚ್ಎಫ್ಎಲ್)ನಿಂದ ರಿಸರ್ವ್ ಬ್ಯಾಂಕಿಗೆ ಒಟ್ಟು 3 ಸಾವಿರದ 688.58 ಕೋಟಿ ರೂಪಾಯಿ ಅನುತ್ಪಾದಕ ಆಸ್ತಿ(ಎನ್ ಪಿಎ) ಮೊತ್ತ ವಂಚನೆಯಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ.

ಪಿಎನ್ ಬಿ ವಂಚನೆ ಪ್ರಕರಣ: ನೀರವ್ ಮೋದಿ, ಮೆಹುಲ್ ಚೋಕ್ಸಿಗೆ ಸೇರಿದ 1,350 ಕೋಟಿ ಮೌಲ್ಯದ ವಜ್ರ, ಮುತ್ತು ಭಾರತಕ್ಕೆ ತಂದ ಇಡಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 1,350 ಕೋಟಿ ಮೌಲ್ಯದ ಮುತ್ತು ಮತ್ತು ವಜ್ರಗಳನ್ನು ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾರತಕ್ಕೆ ತಂದಿದ್ದಾರೆ.

