ನೀರವ್ ಮೋದಿ ತಲೆಮರೆಸಿಕೊಂಡಿಲ್ಲ, ಉದ್ಯಮ ಸಂಬಂಧ ವಿದೇಶಕ್ಕೆ ತೆರಳಿದ್ದಾರೆ: ವಕೀಲ
ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ತಲೆಮರೆಸಿಕೊಂಡಿಲ್ಲ, ಉದ್ಯಮ ಸಂಬಂಧ ವಿದೇಶಕ್ಕೆ ತೆರಳಿದ್ದಾರೆಂದು ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ವಾಲ್ ಅವರು ಬುಧವಾರ ಹೇಳಿದ್ದಾರೆ...

Published On :
ಮುಂಬೈ: ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ತಲೆಮರೆಸಿಕೊಂಡಿಲ್ಲ, ಉದ್ಯಮ ಸಂಬಂಧ ವಿದೇಶಕ್ಕೆ ತೆರಳಿದ್ದಾರೆಂದು ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ವಾಲ್ ಅವರು ಬುಧವಾರ ಹೇಳಿದ್ದಾರೆ.
ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನೀರವ್ ಮೋದಿ ತಲೆ ಮರೆಸಿಕೊಂಡಿಲ್ಲ, ಉದ್ಯಮದ ಉದ್ದೇಶದಿಂದ ವಿದೇಶಕ್ಕೆ ತೆರಳಿದ್ದಾರೆಂದು ಹೇಳಿದ್ದಾರೆ.
ನೀರವ್ ಮೋದಿ ತಲೆಮರೆಸಿಕೊಂಡಿದ್ದಾರೆಂಬುದು ನಿಮ್ಮ ಆಲೋಚನೆಗಳಷ್ಟೇ. ನೀರವ್ ಮೋದಿ ಅಂತರಾಷ್ಟ್ರದ ಮಟ್ಟದಲ್ಲಿ ವ್ಯವಹಾರ ನಡೆಸುತ್ತಿದ್ದು, ಅವರು ತಲೆಮರೆಸಿಕೊಂಡಿಲ್ಲ. ಉದ್ಯಮದ ಉದ್ದೇಶದಿಂದ ಭಾರತದಿಂದ ಹೊರಗೆ ಹೋಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಅವರ ಪಾಸ್'ಪೋರ್ಟ್ ರದ್ದು ಮಾಡಲಾಗಿದೆ. ನೀರವ್ ಕುಟುಂಬಸ್ಥರಲ್ಲಿ ಕೆಲವರು ವಿದೇಶಿಗರಾಗಿದ್ದು, ಯಾವಾಗಲೂ ಅವರು ಹೊರಗಡೆಯೇ ಇರುತ್ತಾರೆಂದು ಸಮರ್ಥಿಸಿಕೊಂಡಿದ್ದಾರೆ.
ವಾಣಿಜ್ಯ ವಹಿವಾಟನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಎಂದು ಹೇಳುತ್ತಿದೆ. ಇಡೀ ಪ್ರಕರಣದ ಬಗ್ಗೆ ಬ್ಯಾಂಕ್'ಗೆ ಗೊತ್ತಿದೆ. ಬ್ಯಾಂಕ್ ಕೋಟ್ಯಾಂತರ ರೂಪಾಯಿ ಕಮಿಷನ್ ಪಡೆದು. ಇದೀಗ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಇದೊಂದು ವಾಣಿಜ್ಯ ವಹಿವಾಟಾಗಿದ್ದು, ಇದನ್ನು ವಂಚನೆ ಎಂದು ಬ್ಯಾಂಕ್ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
ರೂ.5,000 ಕೋಟಿ ಆಸ್ತಿಯನ್ನು ಬಿಟ್ಟು ನೀರವ್ ಮೋದಿ ಏಕೆ ದೇಶ ಬಿಟ್ಟು ಓಡುಹೋಗುತ್ತಾರೆ? ಸಿಬಿಐ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಪ್ರಕರಣದ ಎಲ್ಲಾ ವಿಚಾರಗಳು ಬಹಿರಂಗಗೊಳ್ಳಲಿದೆ. ನೀರವ್ ಮೋದಿಯವರ ಎಲ್ಲಾ ವ್ಯವಹಾರಗಳು ಬಂದ್ ಆಗಿದೆ. ಬ್ಯಾಂಕ್ ಖಾತೆಗಳಿಗೆ ಮುಟ್ಟುಗೋಲು ಹಾಕಲಾಗಿದೆ. ಎಲ್ಲಾ ಅಂಗಡಿಗಳು ಬಂದ್ ಆಗಿವೆ. ಇಂತಹ ಸಂದರ್ಭದಲ್ಲಿ ಎಲ್ಲವೂ ಕತ್ತಲೆ ಕವಿದಂತೆ ಕಾಣುತ್ತಿದೆ. ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕವಷ್ಟೇ ಎಲ್ಲಾ ತಂತ್ರಗಳು ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.
ಇದು ಕೇವಲ ರೂ.5 ಸಾವಿರ ಕೋಟಿ ಪ್ರಕರಣವಾಗಿದ್ದು, ರೂ.11,400 ಕೋಟಿ ಎಂದು ಮಾಧ್ಯಮಗಳು ಹೇಗೆ ಹೇಳುತ್ತಿವೆ. ಮಾಧ್ಯಮಗಳಿಗೆ ಇಂತಹ ವರದಿಗಳು ಹೇಗೆ ಸಿಗುತ್ತಿವೆ ಎಂಬುದು ನನಗೆ ತಿಳಿಯುತ್ತಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CBIಸಿಬಿಐಪಂಜಾಬ್ ನ್ಯಾಷನಲ್ ಬ್ಯಾಂಕ್ವಂಚನೆ ಪ್ರಕರಣFraud CasePunjab national bankNirav Modiನೀರವ್ ಮೋದಿVijay Aggarwalವಿಜಯ್ ಅಗರ್ವಾಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


