ದೇಶ

ಉತ್ತರ ಪ್ರದೇಶ: ಮೊಬೈಲ್ ಸಂಭಾಷಣೆ ತಂದ ಕುತ್ತು, ಮದುವೆಯ ದಿನವೇ ರೈಲು ಹರಿದು ಯುವಕ ಸಾವು

ಮದುವೆಯಾಗಬೇಕಾಗಿದ್ದ ಯುವಕ ಮೊಬೈಲ್ ಸಂಭಾಷಣೆ ಯಲ್ಲಿ ನಿರತನಾಗಿದ್ದ ವೇಳೆ ಎಕ್ಸ್‌ಪ್ರೆಸ್‌ ರೈಲಿನಡಿ ಸಿಕ್ಕಿ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಉತ್ತರ ಪ್ರದೇಶ: ಮೊಬೈಲ್ ಸಂಭಾಷಣೆ ತಂದ ಕುತ್ತು, ಮದುವೆಯ ದಿನವೇ ರೈಲು ಹರಿದು ಯುವಕ ಸಾವು
ನರೇಶ್ ಪಾಲ್ ಗಂಗ್ವಾರ್‌
Published On :
ಬರೇಲಿ (ಉತ್ತರ ಪ್ರದೇಶ): ಮದುವೆಯಾಗಬೇಕಾಗಿದ್ದ ಯುವಕ ಮೊಬೈಲ್ ಸಂಭಾಷಣೆ ಯಲ್ಲಿ ನಿರತನಾಗಿದ್ದ ವೇಳೆ ಎಕ್ಸ್‌ ಪ್ರೆಸ್‌ ರೈಲಿನಡಿ ಸಿಕ್ಕಿ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. 
ನರೇಶ್‌ ಪಾಲ್‌ ಗಂಗ್ವಾರ್‌ ಎನ್ನುವ ಯುವ ಇಂಜಿನಿಯರ್ ಮೃತಪಟ್ಟಿದ್ದು ಉತ್ತರ ಪ್ರದೇಶದ ನಂದೋಸಿ ಗ್ರಾಮದಲ್ಲಿ ಈ ಘಟನೆ ಸಂಬವಿಸಿದೆ. ನೋಯ್ಡಾದಲ್ಲಿ ಸಿವಿಲ್‌ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನರೇಶ್ ಗೆ ಭಾನುವಾರ ಸಂಜೆ ಶಹಜಾನ್‌ಪುರದಲ್ಲಿ ಉಮಾ ಗಂಗ್ವಾರ್‌ ಅವರೊಡನೆ ವಿವಾಹ ಆಗುವವರಿದ್ದರು. ಮನೆ ಮಂದಿಯೆಲ್ಲರೂ ಮದುವೆ ಸಂಭ್ರಮದಲ್ಲಿರುವಾಗಲೇ ಈ ದುರಂತ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.
ಮನೆಗಿಂತ 50 ಮೀಟರ್‌ ದೂರದಲ್ಲಿ ರೈಲ್ವೆ ಹಳಿ ಇತ್ತು. ಸಹೋದ್ಯೋಗಿಗಳ ಕರೆಗೆ ಉತ್ತರಿಸುವ ಸಲುವಾಗಿ ನರೇಶ್‌ ರೈಲ್ವೆ ಹಳಿ ಸಮೀಪ ಬಂದಿದ್ದಾರೆ. ಆಗ ಒಂದು ಮೊಬೈಲ್ ನಲ್ಲಿ ಮಾತನಾಡುತ್ತಾ, ಇನ್ನೊಂದು ಮೊಬೈಲ್ ನಲ್ಲಿ ಸಂದೇಶವನ್ನು ಕಳಿಸುತ್ತಿದ್ದ ನರೇಶ್ ಗೆ ಎದುರಿನಿಂದ ರೈಲು ಬರುತ್ತಿದ್ದದ್ದೂ ಗಮನಕ್ಕೆ ಬರಲಿಲ್ಲ. ಹೀಗಾಗಿ ನರೇಶ್‌ ಗೆ ರಾಜ್ಯ ರಾಣಿ ಎಕ್ಸ್‌ ಪ್ರೆಸ್‌ ರೈಲು ಡಿಕ್ಕಿ ಹೊಡೆದುಕೊಂಡು ಹೋಗಿದೆ ಎಂದು ಅವರ ಸಂಬಂಧಿಕರು ಹೇಳಿದ್ದಾರೆ.
ಘಟನೆಯಿಂದ ನರೇಶ್ ಪೋಷಕರು, ವಧು ಆಘಾತಗೊಂಡಿದ್ದು ಇಡೀ ಮದುವೆ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. 
ನರೇಶ್‌ ಸಾವು ಅವರ ಅವಿವೇಕತನದಿಂದ ಉಂಟಾಗಿದೆ, ಹೊರತು ವಧುವಿನ ಲಕ್ಷಣದಿಂದಲ್ಲ ಎಂದು ಹೇಳಲಾಗುತ್ತಿದೆ. 2014ರಿಂದ 2016ರ ಜನವರಿವರೆಗೆ ಸೆಲ್ಫಿ ಸೇರಿದಂತೆ ಮೊಬೈಲ್ ಫೋನ್ ನಿಂದಾಗಿ 16 ಮಂದಿ ರೈಲ್ವೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.