ಬದಗಾಮ್ ವಾಯುಸೇನಾ ನಿಲ್ದಾಣಕ್ಕೆ ನುಸುಳಲು ಯತ್ನಿಸಿದ ಶಂಕಿತನ ಮೇಲೆ ಸೇನೆ ಗುಂಡು!
ಸುಂಜುವಾನ್ ಸೇನಾ ಶಿಬಿರದ ಮೇಲಿನ ದಾಳಿ ಬಳಿಕ ಸೇನಾಪಡೆಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಪಹರೆ ನಡೆಸುತ್ತಿದ್ದು, ನಿನ್ನೆ ರಾತ್ರಿ ಬದಗಾಮ್ ನಲ್ಲಿರುವ ವಾಯುಸೇನಾ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೋರ್ವನಿಗೆ ಗುಂಡಿಕ್ಕಲಾಗಿದೆ.

Published On :
ಶ್ರೀನಗರ: ಸುಂಜುವಾನ್ ಸೇನಾ ಶಿಬಿರದ ಮೇಲಿನ ದಾಳಿ ಬಳಿಕ ಸೇನಾಪಡೆಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಪಹರೆ ನಡೆಸುತ್ತಿದ್ದು, ನಿನ್ನೆ ರಾತ್ರಿ ಬದಗಾಮ್ ನಲ್ಲಿರುವ ವಾಯುಸೇನಾ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೋರ್ವನಿಗೆ ಗುಂಡಿಕ್ಕಲಾಗಿದೆ.
ಬದಗಾಮ್ ನಲ್ಲಿರುವ ವಾಯುಸೇನಾ ನಿಲ್ದಾಣದ ಬಳಿ ರಾತ್ರಿ ಅನುಮಾನಾಸ್ಪದವಾಗಿ ಸುಮಾರು 55 ವರ್ಷದ ಈ ವ್ಯಕ್ತಿ ಓಡಾಕೊಂಡಿದ್ದನಂತೆ. ಅಲ್ಲದೆ ಸೇನಾ ಪಡೆಗಳು ಅಲ್ಲಿಂದ ತೆರಳುತ್ತಿದ್ದಂತೆಯೇ ನಿಲ್ದಾಣದೊಳಗೆ ಪ್ರವೇಶ ಮಾಡಲು ಮುಂದಾಗಿದ್ದ. ಈ ವೇಳೆ ಅಲ್ಲಿ ಪಹರೆ ಕಾಯುತ್ತಿದ್ದ ಸೈನಿಕರು ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ಹೊರತಾಗಿಯೂ ನಿಲ್ದಾಣದೊಳಗೆ ಪ್ರವೇಶ ಮಾಡಲು ಶಂಕಿತ ವ್ಯಕ್ತಿ ಯತ್ನಿಸಿದಾಗ ಸೇನಾಪಡೆಗಳು ಆತನ ಮೇಲೆ ಗುಂಡು ಹಾರಿಸಿವೆ.
ಸ್ಥಳೀಯರು ಹೇಳಿರುವಂತೆ ಈತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ತಿಳಿದುಬಂದಿದೆ. ಪ್ರಸ್ತುತ ವ್ಯಕ್ತಿ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬದಗಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಅನಾಮಿಕ ವ್ಯಕ್ತಿಯಾರು ಎಲ್ಲಿಂದ ಬಂದವನು ಎಂಬಿತ್ಯಾದಿ ಅಂಶಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian ArmyBudgamಜಮ್ಮು ಮತ್ತು ಕಾಶ್ಮೀರJammu and Kashmirಭಾರತೀಯ ಸೇನೆಭಾರತೀಯ ವಾಯು ಸೇನೆಬದಗಾಮ್Indian AirForce
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


