ಕಾವೇರಿ ಹಂಚಿಕೆ ಸಂಬಂಧ 'ಸುಪ್ರೀಂ' ತೀರ್ಪು ನಿರಾಶೆ ಮೂಡಿಸಿದೆ: ರಜನಿಕಾಂತ್
ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ಕಾವೇರಿ ನೀರನ್ನು ನೀಡುವ ಕುರಿತಾಗಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಇದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ...

Published On :
ಚೆನ್ನೈ: ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ಕಾವೇರಿ ನೀರನ್ನು ನೀಡುವ ಕುರಿತಾಗಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಇದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಕಾವೇರಿ ತೀರ್ಪನ್ನು ನೀಡಿದ್ದು, ತಮಿಳುನಾಡಿಗೆ ಹರಿಸಬೇಕಿರುವ ನೀರಿನ ಪ್ರಮಾಣವನ್ನು 177.2 ಟಿಎಂಸಿಗೆ ಇಳಿಕೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಟ, ರಾಜಕಾರಣಿ ರಜನಿಕಾಂತ್ ಅವರು ಕಾವೇರಿ ತೀರ್ಪು ನಿಜಕ್ಕೂ ನನಗೆ ನಿರಾಶೆ ಮೂಡಿಸಿದೆ. ಇದು ರೈತರ ಜೀವನಾಧಾರದ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮ ಬೀರಲಿದೆ. ಸುಪ್ರೀಂ ತೀರ್ಪಿನಗೆ ತಮಿಳುನಾಡು ಸರ್ಕಾರ ತಕ್ಷಣ ಪರಾಮರ್ಶೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಪುದುಚೇರಿ ಮತ್ತು ಕೇರಳಕ್ಕೆ ಮಾಡಿರುವ ನೀರು ಹಂಚಿಕೆಯನ್ನು ಎತ್ತಿ ಹಿಡಿದ ಕೋರ್ಟ್, ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯದಳು ಸಮಾನ ಹಂಚಿಕೆ ತತ್ವ ಪರಿಪಾಲಿಸಹಬೇಕು ಎಂದು ಸಲಹೆ ನೀಡಿದೆ. ಅಂತೆಯೇ ನದಿಗಳು ರಾಷ್ಟ್ರೀಯ ಸಂಪತ್ತುಗಳಾಗಿದ್ದು, ಯಾವುದೇ ರಾಜ್ಯ ಪೂರ್ಣ ಹಕ್ಕು ಸಾಧಿಸುವಂತಿಲ್ಲ ಎಂದು ಉಭಯ ರಾಜ್ಯಗಳಿಗೆ ಕಿವಿಮಾತು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtಸುಪ್ರೀಂಕೋರ್ಟ್RajinikanthKarnatakaಕರ್ನಾಟಕರಜನಿಕಾಂತ್ಕಾವೇರಿ ವಿವಾದCauvery disputeCauvery Verdictಕಾವೇರಿ ತೀರ್ಪು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


