ಗರ್ಭಿಣಿ ಹೊಟ್ಟೆಗೆ ಒದ್ದ ಸಿಪಿಎಂ ನಾಯಕ: ಮಹಿಳೆಗೆ ಬಲವಂತವಾಗಿ ಗರ್ಭಪಾತ
ಗರ್ಭಿಣಿಯೊಬ್ಬಳ ಹೊಟ್ಟೆಗೆ ಸಿಪಿಂ ನಾಯಕನೊಬ್ಬ ಒದ್ದ ಪರಿಣಾಮವಾಗಿ ಆಕೆ ಬಲವಂತದ ಗರ್ಭಪಾತಕ್ಕೆ ಗುರಿಯಾದ ಪ್ರಕರಣ ವರದಿಯಾಗಿದೆ....

Published On :
ಕೊಜಿಕ್ಕೋಡ್: ಗರ್ಭಿಣಿಯೊಬ್ಬಳ ಹೊಟ್ಟೆಗೆ ಸಿಪಿಂ ನಾಯಕನೊಬ್ಬ ಒದ್ದ ಪರಿಣಾಮವಾಗಿ ಆಕೆ ಬಲವಂತದ ಗರ್ಭಪಾತಕ್ಕೆ ಗುರಿಯಾದ ಪ್ರಕರಣ ವರದಿಯಾಗಿದೆ.
ಸಿಪಿಎಂ ನಾಯಕನಿಂದ ಹೊಟ್ಟೆಗೆ ಒದೆತ ತಿಂದ ಮಹಿಳೆಯು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ.ಮಹಿಳೆಯ ಪತಿ ಮತ್ತು ಪಕ್ಕದ ಮನೆಯ ಪುರುಷನೋರ್ವನ ನಡುವೆ ಮಾತಿನ ಜಟಾಪಟಿ ನಡೆದಿತ್ತು. ಆಗ ಇನ್ನಿಬ್ಬರು ಪುರುಷರು ಅಲ್ಲಿಗೆ ಬಂದ ಮಹಿಳೆಯ ಪತಿಯ ಮೇಲೆ ಹಲ್ಲೆ ನಡೆಸತೊಡಗಿದರು. ತಡೆಯಲು ಬಂದ ಮಹಿಳೆಯನ್ನು ಹಲ್ಲೆಕೋರ ಪುರುಷರಲ್ಲಿ ಒಬ್ಬನಾದ ಸ್ಥಳೀಯ ಸಿಪಿಎಂ ನಾಯಕರು ಮಹಿಳೆಯ ಹೊಟ್ಟೆಗೆ ಒದೆದಿದ್ದಾನೆ. ಪರಿಣಾಮ ಆಕೆಗೆ ಒಡನೆಯೇ ರಕ್ತಸ್ರಾವ ಆರಂಭವಾಯಿತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು; ಅಲ್ಲಿ ಆಕೆಯ ಗಂಭೀರ ಪರಿಸ್ಥಿತಿಯನ್ನು ಪರಿಶೀಲಿಸಿದ ವೈದ್ಯರು ಅನಿವಾರ್ಯವಾಗಿ ಗರ್ಭಪಾತ ಮಾಡಲಾಯಿತು.
ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿ.ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಮಹಿಳೆಯ ಹೊಟೆಗೆ ಒದ್ದ ಮುಖ್ಯ ಆರೋಪಿ ತಲೆತಪ್ಪಿಸಿಕೊಂಡಿದ್ದಾನೆ. ಹೊಟ್ಟೆಗೆ ಒದ್ದು ಬಲವಂತದ ಗರ್ಭಪಾತಕ್ಕೆ ಕಾರಣನಾದ ಸ್ಥಳೀಯ ಸಿಪಿಎಂ ನಾಯಕನ ಗುರುತು ಬಹಿರಂಗ ಮಾಡದಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸಂತ್ರಸ್ತ ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


