ವಾರಣಾಸಿ; ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯ ದೇಹದಲ್ಲಿಯೇ ಸಿರಿಂಜ್ ಬಿಟ್ಟ ವೈದ್ಯರು!
2017ನೇ ಸಾಲಿನಲ್ಲಿ ಮಹಿಳೆಯೊಬ್ಬರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು, ಮಹಿಳೆಯ ದೇಹದೊಳಗೇ ಸಿರಿಂಜ್ ಬಿಟ್ಟಿರುವ ಘಟನೆಯೊಂದು ವಾರಣಾಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದ ಸರ್ ಸುಂದರ್ ಲಾಲ್ ಆಸ್ಪತ್ರೆಯಲ್ಲಿ ನಡೆದಿದೆ...

Published On :
ವಾರಣಾಸಿ; 2017ನೇ ಸಾಲಿನಲ್ಲಿ ಮಹಿಳೆಯೊಬ್ಬರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು, ಮಹಿಳೆಯ ದೇಹದೊಳಗೇ ಸಿರಿಂಜ್ ಬಿಟ್ಟಿರುವ ಘಟನೆಯೊಂದು ವಾರಣಾಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದ ಸರ್ ಸುಂದರ್ ಲಾಲ್ ಆಸ್ಪತ್ರೆಯಲ್ಲಿ ನಡೆದಿದೆ.
ರಾಣಿ ಸಂತ್ರಸ್ತರ ಮಹಿಳೆಯಾಗಿದ್ದಾರೆ. 2013ರಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದ ಮಹಿಳೆ 2017ರಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು ಮಹಿಳೆಯ ದೇಹದೊಳಗೆ ಸಿರಿಂಜ್ ಹಾಗೂ ಶಸ್ತ್ರಚಿಕಿತ್ಸೆಗೆ ಬಳಸಲಾಗಿದ್ದ ಹತ್ತಿಯನ್ನು ಬಿಟ್ಟಿದ್ದಾರೆಂದು ತಿಳಿದುಬಂದಿದೆ.
ಘಟನೆ ಕುರಿತಂತೆ ಮಹಿಳೆಯ ಪತಿ ವಿಕಾಸ್ ದ್ವಿವೇದಿಯವರು ಮಾತನಾಡಿ, 2017ರಲ್ಲಿ ನನ್ನ ಪತ್ನಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಳು. ಶಸ್ತ್ರಚಿಕಿತ್ಸೆ ಬಳಿಕ ಹೊಟ್ಟೆ ನೋವು ಎಂದು ಹೇಳುತ್ತಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಈ ವೇಳೆ ವೈದ್ಯರು ಆಕೆಯ ದೇಹದೊಳಗೆ ಎರಡು ಸಿರಿಂಜ್ ಗಳಿದೆ ಎಂದು ಹೇಳಿದ್ದರು. ನಂತರ ವೈದ್ಯರು ಎಕ್ಸ್-ರೇ ತೆಗೆಸುವಂತೆ ತಿಳಿಸಿದ್ದರು. ಈ ವೇಳೆ ಆಕೆಯ ದೇಹದೊಳಗೆ 3 ಸಿರಿಂಜ್'ಗಳು ಇರುವುದು ಕಂಡು ಬಂದಿತ್ತು ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಯಾವುದೇ ಎಫ್ಐಆರ್ ಗಳು ದಾಖಲಾಗಿಲ್ಲ. ಆದರೆ, ಹೆಚ್ಚಿನ ತನಿಖೆಗಾಗಿ ಘಟನೆ ಕುರಿತಂತೆ ಪೊಲೀಸರು ಮುಖ್ಯ ವೈದ್ಯಕೀಯ ಅದಿಕಾರಿಗಳಿಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.
ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಮಹಿಳಾ ವೈದ್ಯೆಯೊಬ್ಬರು ನನ್ನ ಪತ್ನಿಯ ಹೊಟ್ಟೆಯಲ್ಲಿ ಸಿರಿಂಜ್ ಗಳನ್ನು ಬಿಟ್ಟಿದ್ದಾರೆಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಸಂಜೀವ್ ಮಿಶ್ರಾ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


