ಆಂಧ್ರಪ್ರದೇಶದಲ್ಲಿ ಹಸುವಿನ ಮೇಲೆ ಮಾರಣಾಂತಿಕ ಹಲ್ಲೆ:ಮಾಲೀಕನಿಂದ ಲೈಂಗಿಕ ದೌರ್ಜನ್ಯ ಕೇಸ್ ದಾಖಲು
ಹಸುವೊಂದರ ಮೇಲೆ ಕ್ರೂರವಾಗಿ ಹಲ್ಲೆಯಾಗಿರುವ ಸಂಬಂಧ ಹಸುವಿನ ಮಾಲೀಕ ಪೋಲೀಸರಿಗೆ ದೂರಿತ್ತಿದ್ದು.ದೂರಿನಲ್ಲಿ ಅವರು ತನ್ನ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ.....

Published On :
ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ಹಸುವೊಂದರ ಮೇಲೆ ಕ್ರೂರವಾಗಿ ಹಲ್ಲೆಯಾಗಿರುವ ಸಂಬಂಧ ಹಸುವಿನ ಮಾಲೀಕ ಪೋಲೀಸರಿಗೆ ದೂರಿತ್ತಿದ್ದು.ದೂರಿನಲ್ಲಿ ಅವರು ತನ್ನ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವ ಘಟನೆ ಆಂದ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ನಿವಾಸಿ ಎನ್. ಲಕ್ಷ್ಮಿನಾರಾಯಣ ಎಂಬುವವರು ಈ ದೂರು ಸಲ್ಲಿಸಿದ್ದು . ಡಿಸೆಂಬರ್ 23ರ ಬೆಳಿಗ್ಗೆ ತನ್ನ ಹಸು ಕಾಣೆಯಾಗಿತ್ತು, ಬಳಿಕ ಅಲ್ಲಿ ಇಲ್ಲಿ ಹುಡುಕಿದ ಲಕ್ಷ್ಮಿನಾರಾಯಣ ರಿಗೆ ಗೋಕಿವಾಡ ಗ್ರಾಮದ ಕೆ ಸೂರ್ಯಪ್ರಕಾಸ ರಾವ್ ಅವರ ಹೊಲದಲ್ಲಿ ತನ್ನ ಹಸುವು ಪತ್ತೆಯಾಗಿದೆ. ಹಸುವಿನ ಮೇಲೆ ಕ್ರೂರವಾಗಿ ಹಲ್ಲೆ, ಆಕ್ರಮಣ ನಡೆದಿರುವುದು ಪತ್ತೆಯಾಗಿದೆ.ಅಲ್ಲದೆ ಹಸುವಿನ ಮೇಲೆ ಯಾರೋ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ ಎಂದು ಪಿತಾಪುರಮ್ ಗ್ರಾಮೀಣ ಭಾಗದ ಸಬ್ ಇನ್ಸ್ ಪೆಕ್ಟರ್ ಪಿ.ವಿ ಆರ್ ಮೂರ್ತಿ ಹೇಳಿದ್ದಾರೆ.
ಅಪರಾಧ ಸಂಖ್ಯೆ (ಕ್ರೈಮ್ ನಂಬರ್)92/2018, ಸೆಕೆಂಡ್ 2 (1) (ಎ) ಪ್ರಾಣಿಗಳ ಕಾಯ್ದೆ 1960ರ ಅಡಿಯಲ್ಲಿ ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಇನ್ನೂ ಖಚಿತವಾಗಿಲ್ಲ.ಪಶುವೈದ್ಯರಿಂದ ವರದಿ ಬಂದ ಬಳಿಕವಷ್ಟೇ ಇದು ಖಾತರಿಯಾಗಲಿದೆ ಎಂದು ಪೋಲೀಸರು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


