ದೇಶ

ರಾಮ ಮಂದಿರ ನಿರ್ಮಾಣ ಮಾಡುವ ಪಕ್ಷಕ್ಕೇ ನಮ್ಮ ಮತ: ರಾಜನಾಥ್ ಸಿಂಗ್ ಭಾಷಣಕ್ಕೆ ಸಾರ್ವಜನಿಕರ ಅಡ್ಡಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಉತ್ತರ ಪ್ರದೇಶದಲ್ಲಿ ಭಾಷಣ ಮಾಡುತ್ತಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇದೇ ವಿಷಯವಾಗಿ ಮುಜುಗರದ ಸನ್ನಿವೇಶ

ರಾಮ ಮಂದಿರ ನಿರ್ಮಾಣ ಮಾಡುವ ಪಕ್ಷಕ್ಕೇ ನಮ್ಮ ಮತ: ರಾಜನಾಥ್ ಸಿಂಗ್ ಭಾಷಣಕ್ಕೆ ಸಾರ್ವಜನಿಕರ ಅಡ್ಡಿ!
ರಾಜನಾಥ್ ಸಿಂಗ್
Published On :
ಲಖನೌ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಉತ್ತರ ಪ್ರದೇಶದಲ್ಲಿ ಭಾಷಣ ಮಾಡುತ್ತಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇದೇ ವಿಷಯವಾಗಿ ಮುಜುಗರದ ಸನ್ನಿವೇಶ ಎದುರಿಸಿದ್ದಾರೆ. 
ಡಿ.23 ರಂದು ಲಖನೌ ನಲ್ಲಿ ಮಾತನಾಡುತ್ತಿದ್ದ ರಾಜನಾಥ್ ಸಿಂಗ್ ಅವರ ಭಾಷಣಕ್ಕೆ ಅಡ್ಡಿ ಪಡಿಸಿದ ಸಾರ್ವಜನಿಕರು, ರಾಮ ಮಂದಿರ ನಿರ್ಮಾಣ ಮಾಡುವ ಪಕ್ಷಕ್ಕೇ ನಮ್ಮ ಮತ ಎಂದು ಕೂಗಿದ್ದಾರೆ. ಲಖನೌ ಸಂಸದರೂ ಆಗಿರುವ ರಾಜನಾಥ್ ಸಿಂಗ್ ಯುವ ಕುಂಭ್ ನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಜನತೆ, ರಾಜನಾಥ್ ಸಿಂಗ್ ಭಾಷಣಕ್ಕೆ ಕೆಲವು ನಿಮಿಷಗಳ ಕಾಲ ಅಡ್ಡಿಪಡಿಸಿ ರಾಮ ಮಂದಿರ ನಿರ್ಮಾಣ ಮಾಡುವ ಪಕ್ಷಕ್ಕೇ ನಮ್ಮ ಮತ ಎಂದು ಕೂಗಿದ್ದಾರೆ.
ಆಯೋಜಕರು ಘೋಷಣೆ ಕೂಗುತ್ತಿದ್ದವರನ್ನು ಸಮಾಧಾನಪಡಿಸಿದ ನಂತರ ರಾಜನಾಥ್ ಭಾಷಣ ಮುಂದುವರೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.