ದೇಶ

ಪೋಷಕರ ಮೊಬೈಲ್‌ನಲ್ಲಿ ಸೆಕ್ಸ್ ಚಿತ್ರ ವೀಕ್ಷಿಸಿ, ತನ್ನ ಸ್ನೇಹಿತನ ಮೇಲೆ ಸೆಕ್ಸ್ ಮಾಡಿ ಕೊಂದ ಬಾಲಕ!

ತಂದೆ-ತಾಯಿ ಮೊಬೈಲ್ ನಲ್ಲಿ ಸೆಕ್ಸ್ ಚಿತ್ರವನ್ನು ನೋಡಿದ ಬಳಿಕ 15 ವರ್ಷದ ಬಾಲಕ ತನ್ನ ಸ್ನೇಹಿತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆಗೈದ ಬೆಚ್ಚಿಬೀಳಿಸುವ...

ಪೋಷಕರ ಮೊಬೈಲ್‌ನಲ್ಲಿ ಸೆಕ್ಸ್ ಚಿತ್ರ ವೀಕ್ಷಿಸಿ, ತನ್ನ ಸ್ನೇಹಿತನ ಮೇಲೆ ಸೆಕ್ಸ್ ಮಾಡಿ ಕೊಂದ ಬಾಲಕ!
ಸಂಗ್ರಹ ಚಿತ್ರ
Published On :
ಮುಂಬೈ: ತಂದೆ-ತಾಯಿ ಮೊಬೈಲ್ ನಲ್ಲಿ ಸೆಕ್ಸ್ ಚಿತ್ರವನ್ನು ನೋಡಿದ ಬಳಿಕ 15 ವರ್ಷದ ಬಾಲಕ ತನ್ನ ಸ್ನೇಹಿತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆಗೈದ ಬೆಚ್ಚಿಬೀಳಿಸುವ ಘಟನೆ ಮುಂಬೈನಲ್ಲಿ ನಡೆದಿದೆ. 
ಕಳೆದ ಗುರುವಾರ 10 ವರ್ಷದ ಬಾಲಕನ ಕೊಲೆಯಾಗಿತ್ತು. ಆತನ ಶವ ಶನಿವಾರ ದಿನ ಸಪೇದ್ ಪುಲ್ ನಾಲಾದಲ್ಲಿ ತೇಲುತ್ತಿದ್ದ ಟ್ರಾಲಿ ಬ್ಯಾಗೊಂದರಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆತಂಕಕಾಗಿ ವಿಷಯ ತಿಳಿದಿದೆ.
ವಿಚಾರಣೆ ವೇಳೆ 15 ವರ್ಷದ ಬಾಲಕ ನಾನು ಪೋಷಕರ ಮೊಬೈಲ್ ಅನ್ನು ಗೇಮ್ ಆಡಲು ಬಳಸುತ್ತಿದ್ದೆ. ಒಂದು ಸಲ ಮೊಬೈಲ್ ನಲ್ಲಿ ಸೆಕ್ಸ್ ಚಿತ್ರದ ನೋಡಿದ ನಾನು ಬಳಿಕ ಆಗ್ಗಾಗ್ಗೆ ನೋಡುತ್ತಲೇ ಇದ್ದೆ. ಅದೇ ನನಗೆ ಗೆಳೆಯನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರೇರಣೆಯಾಯಿತು ಎಂದು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. 
ಗುರುವಾರ ಸಂಜೆ 5.30ರ ಸುಮಾರಿಗೆ ಟ್ಯೂಷನ್ ಗೆ ಹೋಗುತ್ತಿದ್ದ ಬಾಲಕನನ್ನು ಕರೆದು ಮನೆಯೊಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದೆ. ಆಗ ಆತ ಕಿರುಚಿಗೊಂಡಾಗ ಭಯಗೊಂಡು ನಾನು ಆತನ ಕುತ್ತಿಗೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದುಕೊಂಡೆ. ಆತ ಸತ್ತ ನಂತರ ಆತನನ್ನು ಬ್ಯಾಗ್ ನಲ್ಲಿ ಹಾಕಿ ನಾಲೆಗೆ ಬಿಸಾಡಿ ಬಂದೆ ಎಂದು ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.