ಬೆಂಗಳೂರು: ಇದೇ ಮೊದಲ ಬಾರಿಗೆ ಬ್ಲೆಂಡೆಡ್ ಬಯೋ-ಜೆಟ್ ಇಂಧನದಿಂದ ಸೇನಾ ವಿಮಾನ ಹಾರಾಟ!
ಇದೇ ಮೊದಲ ಬಾರಿಗೆ ಭಾರತೀಯ ವಾಯು ಪಡೆ ಡಿ.18 ರಂದು ಬ್ಲಂಡೆಡ್ ಬಯೋ-ಜೆಟ್ ಇಂಧನ ಬಳಕೆ ಮಾಡಿ ಸೇನಾ ವಿಮಾನದ ಹಾರಾಟ ನಡೆಸಿದೆ.

Published On :
ಬೆಂಗಳೂರು: ಇದೇ ಮೊದಲ ಬಾರಿಗೆ ಭಾರತೀಯ ವಾಯು ಪಡೆ ಡಿ.18 ರಂದು ಬ್ಲಂಡೆಡ್ ಬಯೋ-ಜೆಟ್ ಇಂಧನ ಬಳಕೆ ಮಾಡಿ ಸೇನಾ ವಿಮಾನದ ಹಾರಾಟ ನಡೆಸಿದೆ.
ಬೆಂಗಳೂರಿನಲ್ಲಿ ಈ ಪ್ರಯೋಗ ನಡೆದಿದ್ದು, ಐಎಎಫ್ ಹಾಗೂ ಡಿಆರ್ ಡಿಒ, ಡಿಜಿಎಕ್ಯೂಎ ಹಾಗೂ ಸಿಎಸ್ಐಆರ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಮ್ ನ ಸಹಯೋಗದಲ್ಲಿ ಈ ಪ್ರಯೋಗ ನಡೆಸಲಾಗಿದೆ.
ಜು.27 ರಂದು ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ವಾಯುಪಡೆ ಮುಖ್ಯಸ್ಥ ಬಿಎಸ್ ಧನೊವಾ ಅವರು ಬ್ಲಂಡೆಡ್ ಬಯೋ ಜೆಟ್ ಇಂಧನ ಬಳಕೆ ಮಾಡಿ ವಿಮಾನ ಹಾರಾಟ ನಡೆಸುವ ಪ್ರಯೋಗದ ಕುರಿತು ಘೋಷಣೆ ಮಾಡಿದ್ದರು. ಅದರಂತೆಯೇ ಈಗ ಎಎನ್-32 ಟ್ರಾನ್ಸ್ ಪೋರ್ಟರ್ ಏರ್ ಕ್ರಾಫ್ಟ್ ನ್ನು ಬ್ಲಂಡೆಡ್ ಬಯೋ-ಜೆಟ್ ಇಂಧನ ಬಳಕೆ ಮಾಡಿ ಸೇನಾ ವಿಮಾನದ ಹಾರಾಟ ನಡೆಸಲಾಗಿದೆ.
ಬ್ಲಂಡೆಡ್ ಬಯೋ-ಜೆಟ್ ಇಂಧನದಲ್ಲಿ ಶೇ.10 ರಷ್ಟು ಬಯೋ-ಜೆಟ್ ಇಂಧನ ಬಳಕೆ ಮಾಡಲಾಗುತ್ತದೆ. ಛತ್ತೀಸ್ ಗಢ ಬಯೋ ಡಿಸೆಲ್ ಅಭಿವೃದ್ಧಿ ಪ್ರಾಧಿಕಾರ (ಸಿಬಿಡಿಎ)ದಿಂದ ಪೂರೈಕೆಯಾಗುವ ಜಟ್ರೊಫಾ ತೈಲದಿಂದ ಬ್ಲಂಡೆಡ್ ಬಯೋ ಜೆಟ್ ಇಂಧನವನ್ನು ತಯಾರಿಸಲಾಗುತ್ತದೆ.
2018 ರ ಆಗಸ್ಟ್ ತಿಂಗಳಲ್ಲಿ ದೇಶದ ಮೊದಲ ವಾಣಿಜ್ಯ ವಿಮಾನ ಸ್ಪೈಸ್ ಜೆಟ್ ಸಂಸ್ಥೆ ಬಯೋ ಜೆಟ್ ಇಂಧನವನ್ನು ಬಳಸಿ ಡೆಹ್ರಾಡೂನ್-ದೆಹಲಿ ನಡುವೆ ವಿಮಾನ ಹಾರಾಟ ನಡೆಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


