ಡೆಡ್ಲೈನ್ ವಿಸ್ತರಣೆಗೆ 'ಸುಪ್ರೀಂ' ನಕಾರ: ನಾಳೆಯಿಂದ ಹೊಸ ವಾಹನ ವಿಮಾ ನೀತಿ ಜಾರಿ
ನಾಳೆಯಿಂದ ಹೊಸ ಕಾರು ಮತ್ತು ದ್ವಿ ಚಕ್ರವಾಹನಗಳು ಕ್ರಮವಾಗಿ ಮೂರು ಮತ್ತು ಐದು ವರ್ಷಗಳ ಅವಧಿಯ ಥರ್ಢ್ ಪಾರ್ಟಿ ವಿಮೆ ವ್ಯಾಪ್ತಿಗೊಳಪಡುವುದು ಕಡ್ಡಾಯವಾಗಿದ್ದು, ಗಡವು ವಿಸ್ತರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ನವದೆಹಲಿ :ನಾಳೆಯಿಂದ ಹೊಸ ಕಾರು ಮತ್ತು ದ್ವಿ ಚಕ್ರವಾಹನಗಳು ಕ್ರಮವಾಗಿ ಮೂರು ಮತ್ತು ಐದು ವರ್ಷಗಳ ಅವಧಿಯ ಥರ್ಢ್ ಪಾರ್ಟಿ ವಿಮೆ ವ್ಯಾಪ್ತಿಗೊಳಪಡುವುದು ಕಡ್ಡಾಯವಾಗಿದ್ದು, ಗಡವು ವಿಸ್ತರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ವಿಮೆ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರದಿಂದ 1938ರ ವಿಮೆ ಕಾಯ್ದೆ ವಿನಾಯಿತಿ ಅಡಿಯಲ್ಲಿ ಸ್ಥಾಪಿತಗೊಂಡಿರುವ ಜನರಲ್ ವಿಮಾ ಸಮಿತಿ ಗಡುವು ವಿಸ್ತರಣೆ ಕೋರಿ ಉನ್ನತ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರಾದ ಮದನ್ ಬಿ ಠಾಕೂರ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠ ವಜಾಗೊಳಿಸಿದೆ.
ಈಗಿರುವ ವಿಮೆಯ ಅವಧಿ ಒಂದು ವರ್ಷದಾಗಿದ್ದು, ಹೊಸ ಕಾರುಗಳು ಮೂರು ವರ್ಷಗಳ ಅವಧಿಗೆ ಮತ್ತು ದ್ವಿಚಕ್ರಗಳು ಐದು ವರ್ಷಗಳ ಥರ್ಡ್ ಪಾರ್ಟಿ ವಿಮೆ ವ್ಯಾಪ್ತಿಗೊಳಪಡುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಜುಲೈ 20 ರಂದು ತೀರ್ಪು ನೀಡಿತ್ತು.
ನಾಳೆಯಿಂದಲೇ ಹೊಸ ನಿಯಮಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


