ದೇಶ

ಉತ್ತರಪ್ರದೇಶ ಸಿಎಂ ಯೋಗಿ, ಪ್ರಧಾನಿ ಮೋದಿಯನ್ನೊಳಗೊಂಡ ಬಂಗಾರದ ರಾಖಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ

ಸಹೋದರ-ಸಹೋದರಿಯರ ಬಂಧನ ಸಾರುವ ಪವಿತ್ರ ರಕ್ಷಾಬಂಧನ ಹಬ್ಬಕ್ಕೆ ಕೇವಲ ಒಂದು ದಿನ ಬಾಕಿಯಿದ್ದು, ಈಗಾಗಲೇ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ...

ಉತ್ತರಪ್ರದೇಶ ಸಿಎಂ ಯೋಗಿ, ಪ್ರಧಾನಿ ಮೋದಿಯನ್ನೊಳಗೊಂಡ ಬಂಗಾರದ ರಾಖಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ
ಉತ್ತರಪ್ರದೇಶ ಸಿಎಂ ಯೋಗಿ, ಪ್ರಧಾನಿ ಮೋದಿಯನ್ನೊಳಗೊಂಡ ಬಂಗಾರದ ರಾಖಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ
Published On :
ಸೂರತ್: ಸಹೋದರ-ಸಹೋದರಿಯರ ಬಂಧನ ಸಾರುವ ಪವಿತ್ರ ರಕ್ಷಾಬಂಧನ ಹಬ್ಬಕ್ಕೆ ಕೇವಲ ಒಂದು ದಿನ ಬಾಕಿಯಿದ್ದು, ಈಗಾಗಲೇ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 
ಈ ನಡುವೆ ಗುಜರಾತ್ ರಾಜ್ಯದ ಸೂರತ್'ನಲ್ಲಿರುವ ಆಭರಣದ ಮಳಿಗೆಯೊಂದು ವಿಶೇಷ ರಾಖಿಯನ್ನು ಸಿದ್ಧಪಡಿಸಿದ್ದು, ಈ ರಾಖಿಗೆ ಎಲ್ಲಿಲ್ಲದ ಬೇಡಿಕೆ ಆರಂಭವಾಗಿದೆ. 
ಪ್ರಧಾನಮಂತ್ರಿ ನರೇಂದ್ರ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗುಜರಾತ್ ರಾಜ್ಯ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರ ಭಾವಚಿತ್ರವನ್ನೊಳಗೊಂಡ ಬಂಗಾರದ ರಾಖಿಯನ್ನು ಈ ಮಳಿಗೆ ಸಿದ್ಧಪಡಿಸಿದ್ದು, ಮಾರುಕಟ್ಟೆಯಲ್ಲಿ ಈ ರಾಖಿಗೆ ಬೇಡಿಕೆ ಆರಂಭವಾಗಿದೆ. 
22 ಕ್ಯಾರೆಟ್ ಚಿನ್ನದಲ್ಲಿ ಈ ಬಂಗಾರ ರಾಖಿ ಸಿದ್ಧಪಡಿಸಲಾಗಿದ್ದು, ಸುಮಾರು 50 ರಾಖಿಗಳನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ 47 ರಾಖಿಗಳು ಮಾರಾಟವಾಗಿದ್ದು, ಪ್ರತಿ ನಿತ್ಯ ರೂ.50ಸಾವಿರದಿಂದ ರೂ.70 ಸಾವಿರವರೆಗೆ ರಾಖಿ ಮಾರಾಟವಾಗುತ್ತಿದೆ ಎಂದು ಆಭರಣ ಮಳಿಗೆ ಮಾಲೀಕ ಹೇಳಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿಗಳು ದೇಶಕ್ಕಾಗಿ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದರಿಂದ ವಿಶ್ವದ ಲಕ್ಷಾಂತರ ಜನರು ಸ್ಫೂರ್ತಿ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಮಳಿಗೆ ಬರುವ ಮಹಿಳೆಯರು ರಾಖಿಯನ್ನು ನೋಡಿ ಸ್ಫೂರ್ತಿ ಪಡೆದುಕೊಂಡು ತಮ್ಮ ಸಹೋದರರೂ ಕೂಡ ಇಂತಹ ನಾಯಕರಾಗಬೇಕೆಂದು ರಾಖಿಗಳನ್ನು ಖರೀದಿ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.