ಇಬ್ಬರು ಗಂಡಂದಿರ ಜಗಳ, ಮೂರನೇ ವ್ಯಕ್ತಿ ಜೊತೆ ಓಡಿ ಹೋದ ಮಹಿಳೆ!
ಬೆಂಗಳೂರು-ನೆಲಮಂಗಲ ಹೆದ್ದಾರಿಯಲ್ಲಿ ಒಬ್ಬ ಮಹಿಳೆಗಾಗಿ ಇಬ್ಬರು ಗಂಡಂದಿರು ಬಡಿದಾಡಿಕೊಂಡಿರುವ ಘಟನೆ ನಡೆಸಿದೆ...

Published On :
ಬೆಂಗಳೂರು: ಬೆಂಗಳೂರು-ನೆಲಮಂಗಲ ಹೆದ್ದಾರಿಯಲ್ಲಿ ಒಬ್ಬ ಮಹಿಳೆಗಾಗಿ ಇಬ್ಬರು ಗಂಡಂದಿರು ಬಡಿದಾಡಿಕೊಂಡಿರುವ ಘಟನೆ ನಡೆಸಿದೆ.
ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬ ಗಾಧೆ ಈ ಪ್ರಕರಣಕ್ಕೆ ಸರಿ ಹೊಂದುತ್ತದೆ. ಹೌದು ಇಬ್ಬರಿಗೂ ಚಳ್ಳೆ ಹಣ್ಣು ತಿನಿಸಿದ ಮಹಿಳೆ ಮೂರನೇಯವನ ಜತೆ ಪರಾರಿಯಾಗಿದ್ದಾಳೆ.
ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು ಮತ್ತು ನೆಲಮಂಗಲದ ಬಾವಿಕೆರೆ ಕ್ರಾಸ್ ನಲ್ಲಿ ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಈ ಡ್ರಾಮಾ ನೋಡಲು ವಾಹನ ಸವಾರರು ಸಾಲುಗಟ್ಟಿದ್ದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಹಲವರು ಈ ಸಂಪೂರ್ಣ ಘಟನಾವಳಿಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
38 ವರ್ಷದ ಶಶಿಕಲಾ ಬಟ್ಟೆ ಬದಲಿಸಿದಂತೆ ಗಂಡಸರನ್ನು ಬದಲಾಯಿಸುತ್ತಿದ್ದಳು. 2000ನೇ ಇಸವಿಯಲ್ಲಿ ಟ್ರಾಕ್ಟರ್ ಚಾಲಕನಾಗಿರುವ ರಂಗಸ್ವಾಮಿ ಎಂಬಾತನ ಜತೆ ಮದುವೆಯಾಗಿತ್ತು. 2010ರಲ್ಲಿ ರಂಗಸ್ವಾಮಿಯನ್ನು ಬಿಟ್ಟು ರಮೇಶ್ ಕುಮಾರ್ ಎಂಬುವರನ್ನು ವಿವಾಹವಾದಳು. 2015ರಲ್ಲಿ ಆತನನ್ನು ಸಹ ತೊರೆದು ಕುಮಾರ್ ಎಂಬಾತನ ಜತೆ ಬದುಕುತ್ತಿದ್ದಳು. ನಂತರ 2 ಮಕ್ಕಳ ತಂದೆಯಾಗಿರುವ ಚಿಕ್ಕಬಿದರಕಲ್ಲು ಮೂರ್ತಿ ಎಂಬಾತನ ಜತೆ ಜೀವನ ಸಾಗಿಸ ತೊಡಿಗಿದ್ದಾಳೆ.
ಈ ನಡುವೆ ಮೂರ್ತಿಯನ್ನು ಬಿಟ್ಟು ಗಾರ್ಮೆಂಟ್ಸ್ ನಲ್ಲಿ ಕ್ಯಾಬ್ ಚಾಲಕನಾಗಿರುವ ಸಿದ್ದರಾಜು ಎಂಬಾತ ಜತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದು ಇದರಿಂದ ಮೂರ್ತಿ ಮತ್ತು ಸಿದ್ದರಾಜು ಇಬ್ಬರು ರಸ್ತೆ ಮಧ್ಯೆ ಬಡಿದಾಡಿಕೊಂಡಿದ್ದಾರೆ. ಈ ಮಧ್ಯೆ ಮಹಿಳೆ ಇವರಿಬ್ಬರ ಸಂಗಡ ಬೇಡ ಎಂದು ಮೂರನೇಯವನ ಜೊತೆ ಓಡಿ ಹೋಗಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


