ಸುಲಿಗೆ ಪ್ರಕರಣ: ಅಬು ಸಲೀಂ ವಿರುದ್ಧದ ತೀರ್ಪು ಪ್ರಕಟಣೆ ಮತ್ತೆ ವಿಳಂಬ
1993 ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬು ಸೇಲಂ ಮೇಲಿರುವ 2002ರ ಸುಲಿಗೆ ಪ್ರಕರಣ ತೀರ್ಪನ್ನು ದೆಹಲಿಯ ಪಾಟಿಯಾಲಾ ಹೌಸ್ ನ್ಯಾಯಾಲಯವು ಮೇ 04 ರವರೆಗೆ ಮುಂದೂಡಿದೆ.

Published On :
ನವದೆಹಲಿ: 1993 ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬು ಸಲೀಂ ಮೇಲಿರುವ 2002ರ ಸುಲಿಗೆ ಪ್ರಕರಣ ತೀರ್ಪನ್ನು ದೆಹಲಿಯ ಪಾಟಿಯಾಲಾ ಹೌಸ್ ನ್ಯಾಯಾಲಯವು ಮೇ 04 ರವರೆಗೆ ಮುಂದೂಡಿದೆ.
ಇಂದು ನಿಗದಿಯಾಗಿದ್ದ ತೀರ್ಪು ಪ್ರಕಟಣೆಯನ್ನು ಕಾರಣಾಂತರದಿಂದ ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ.
ಏಪ್ರಿಲ್ 21ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು (ಏ.28) ತೀರ್ಪು ಪ್ರಕಟಿಸುವುದಾಗಿ ಘೋಷಿಸಿತ್ತು. ಆದರೆ ಇಂದು ಮತ್ತೆ ತೀರ್ಪನ್ನು ಒಂದು ವಾರದ ಮಟ್ಟಿಗೆ ಮುಂದೂಡಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಸಲೀಂ ಬಗ್ಗೆ ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣ ಫೆಬ್ರವರಿಯಲ್ಲಿ ಮತ್ತೆ ಹೊಸದಾಗಿ ವಿಚಾರಣೆಗೆ ಪ್ರಾರಂಭಿಸಲು ಫ್ರೆಶ್ ಪ್ರೊಡಕ್ಷನ್ ವಾರಂಟ್ ಹೊರಡಿಸಲಾಗಿತ್ತು.
ಸಧ್ಯ 2002 ರಲ್ಲಿ ದೆಹಲಿ ಉದ್ಯಮಿ ಅಶೋಕ್ ಗುಪ್ತಾ ಅವರಿಂದ 5 ಕೋಟಿ ರೂ.ಸುಲಿಗೆ ಮಾಡಿದ್ದ ಸಂಬಂಧ ಅಬು ಸಲೀಂ ತನಿಖೆ ಎದುರಿಸುತ್ತಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiAbu SalemPatiala House Courtಪಟಿಯಾಲ ಹೌಸ್ ಕೋರ್ಟ್ಅಬು ಸಲೀಂ2002 extortion case2002ರ ಸುಲಿಗೆ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


